“ಚಿಕ್ಕೋಡಿ-ಸದಲಗಾ ಕ್ಷೇತ್ರದಲದಲ್ಲಿ ನೊಂದಣೆ ಮಾಡಿದ್ದ ಸ್ತ್ರೀಶಕ್ತಿ  ಸಂಘಗಳಿಗೆ ತಲಾ  1 ಲಕ್ಷ ಸಹಾಯಧನ ನೀಡಲಾಗುವದು” : ಜನಪ್ರಿಯ ಶಾಸಕ ಗಣೇಶ ಹುಕ್ಕೇರಿ

ಚಿಕ್ಕೋಡಿ :–

“ಚಿಕ್ಕೋಡಿ – ಸದಲಗಾ ಕ್ಷೇತ್ರದಲದಲ್ಲಿ  3482 ಸ್ತ್ರೀ ಶಕ್ತಿ” ಸಂಘಗಳಿವೆ.

ನೊಂದಣೆ ಮಾಡಿದ್ದ ಸ್ತ್ರೀಶಕ್ತಿ  ಸಂಘಗಳಿಗೆ ತಲಾ  1 ಲಕ್ಷ ಸಹಾಯಧನ ನೀಡಲಾಗುವದು ಎಂದು “ಜನಮೆಚ್ಚುಗೆ ಗಳಿಸಿದ  ಶಾಸಕ ಗಣೇಶ ಹುಕ್ಕೇರಿ” ಹೇಳಿದರು.

ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಶ್ರೀ.ಸದ್ಗುರು ರುದ್ರಾವಧೂತ ದೇವಸ್ಥಾನ ಟ್ರಸ್ಟ ಉದ್ಘಾಟನಾ ಸಮಾರಂಭದಲ್ಲಿ  ಮಾತನಾಡಿದ ಅವರು,ಎಲ್ಲಾ ಸಮಾಜದವರು ರುದ್ರಾವಧೂತರ ಭಕ್ತರಾಗಿದ್ದಾರೆ.ಎಲ್ಲಾರೂ ಸೇರಿಕೊಂಡು ಗ್ರಾಮದ ಅಭಿವೃದ್ದಿಗೆ ಶ್ರಮಸೋಣ ಎಂದರು.ಕಳೆದ ಚುನಾವಣೆಯಲ್ಲಿ ಕ್ಷೇತ್ರದ ಜನರು 80 ಸಾವಿರ ಕಿಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಜನರು ನನಗೆ  ಆರ್ಶಿವಾದ  ಮಾಡಿದ್ದಾರೆ.ಇದರಿಂದಾಗಿ ನನಗೆ ಜನರ ಸೇವೆ ಮಾಡಲು ಅವಕಾಶ ನೀಡಿದ್ದಾರೆ ಎಂದರು.ಮುಖ್ಯಮಂತ್ರಿ ಅವರು 

ಮೂರು ತಿಂಗಳಲ್ಲಿ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದರು .ಜಿಲ್ಲೆಯಾದಲ್ಲಿ 

ಹಿರೇಕೋಡಿ ಗ್ರಾಮಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುವದು.

ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ  ಮೆಡಿಕಲ್,ಆರ್ಯುವೇಧ,ಇಂಜನಿಯರಿಂಗ ಪ್ರಾರಂಭಿಸಿ ಈ ಭಾಗದ‌ ಮಕ್ಕಳು ಉನ್ನತ ಶಿಕ್ಷಣ‌ ಪಡೆಯಲಿದ್ದಾರೆ ಎಂದರು.

14 ತಿಂಗಳಲ್ಲಿ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತರಲಾಗುವದು ಎಂದರು. 

ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅಚರು ಈ ಯೋಜನೆಗೆ ಈಗಾಗಲೇ ಹಣ ಬಿಡುಗಡೆ ಮಾಡಿದ್ದಾರೆ ಎಂದರು.ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ  ಎಂದರು.ಚಿಕ್ಕೋಡಿ-ಸದಲಗಾ ಕ್ಷೇತ್ರದ ಸಮುದಾಯ ಭವನ‌ ನಿರ್ಮಾಣಕ್ಕೆ‌ 10 ಕೋಟಿ ನೀಡಲಾಗುವದು ಎಂದರು.ಎಲ್ಲಾರೂ ಕಡ್ಡಾಯವಾಗಿ ಶಿಕ್ಷಣ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ‌ಬರಬೇಕಾಗಿದೆ ಎಂದರು.ಚಿಕ್ಕೋಡಿ-ಸದಲಗಾ‌ ಕ್ಷೇತ್ರದಲ್ಲಿ ಶೇ.99 ರಷ್ಟು ನೀರಾವರಿ ಮಾಡಲಾಗುವದು .

ಅವಧೂತರ ಮಠದಲ್ಲಿ ಇನ್ನು ಶ್ರಾವಣ ಮಾಸದಲ್ಲಿ ಶ್ರೀ.ಅನ್ನಪೂರ್ಣೆಶ್ವರಿ ಫೌಂಡೇಷನ್ ದಿಂದ ಪ್ರಸಾದ ವ್ಯವಸ್ಥೆ ಮಾಡಲಾಗುವದು  ಎಂದರು.ಗುರುವಾರ ಪೇಠ ರಸ್ತೆ ಅಗಲೀಕರಣ ಮಾಡಿ ಸುಂದರ ಪಟ್ಟಣ‌‌‌ ಮಾಡಲಾಗುವದು  ಎಂದರು.

ಶ್ರೀ.ಸದ್ಗುರು ರುದ್ರಾವಧೂತ ದೇವಸ್ಥಾನ ಟ್ರಸ್ಟ ಅಧ್ಯಕ್ಷ ಬಿ.ಡಿ.ಮಾಳಗೆ ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀ.ರುದ್ರಾವಧೂತರ ‌ಆದರ್ಶಗಳನ್ನು ನಾವೂ ಅಳವಡಿಸಿಕೊಳ್ಳಬೇಕಾಗಿದೆ ಎಂದರು.ನಮ್ಮ‌ ಗ್ರಾಮದಲ್ಲಿ ಎಲ್ಲಾ ಸಮಾಜದವರು ಶ್ರೀಮಠದ ಭಕ್ತರಾಗಿದ್ದಾರೆ ಎಂದರು.

ಪುರಸಭೆ ಸದಸ್ಯ ರಾಮಾ 

ಮಾನೆ ಹಾಗೂ  ಪಾಂಡವ ಮಹಾರಾಜ  ಮಾತನಾಡಿದರು.

ಕಾರ್ಯಕ್ರಮದಲ್ಲಿ ಉತ್ತಮ ಅವಧೂತ ಗುರುಗಳು ದಿವ್ಯ  ಸಾನಿಧ್ಯ ವಹಿಸಿದ್ದರು.ಮುಖಂಡರಾದ ಜಗದೀಶ ಕವಟಗಿಮಠ,

ಹಿರೇಕೋಡಿ ಗ್ರಾಮ ಪಂಚಯತ ಅಧ್ಯಕ್ಷೆ ರಮಾದೇವಿ ಕಲ್ಲಪ್ಪಾ ಮುಕಂದ,ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ  ತಹಶೀಲ್ದಾರ ಸಂಜು ಕಾರ್ನಿಕ,ಅನೀಲ ಮಾನೆ,ಹಿರಿಯ ಉಪ ನೊಂದಣಾಧಿಕಾರಿ ವಿದ್ಯಾಧರ ದೇವ ಋಷಿ,ಬಾಬರ ಪಟೇಲ,ದಾದಾ ಪಟೇಲ,ಬಸವರಾಜ ಆರ್.ಚನ್ನಯನ್ನವರ,ಸುರೇಶ ಚೌಗಲಾ,ಬಾಬಾಸಾಹೇಬ ಗುಡಿಮನಿ,ಸುಭಾಷ ಚೌಗಲಾ,ಭೀಮಗೌಡ ಪಾಟೀಲ,ನಿಜಾಮ ಪಟೇಲ,ಪ್ರಮೋದ‌ ಮಲ್ಲಗೋಳ,ಮಲ್ಲಪ್ಪಾ ಪೂಜಾರಿ,

ಸದಾಶಿವ ಅಪ್ಪಣ್ಣಾ ಕಾಂಬಳೆ,ಸಾತ್ವಿಕ ಕಟ್ಟಿ,ಅರವಿಂದ ಚೌಗಲಾ,ಹಾಗೂ ಗ್ರಾಮ ಪಂಚಾಯತ ಸದಸ್ಯರು ಹಾಗೂ ಗ್ರಾಮದ  ಮುಖಂಡರು ಭಾಗವಹಿಸಿದ್ದರು.

Share this post:

Leave a Reply

Your email address will not be published. Required fields are marked *

You cannot copy content of this page