2.5 ಬಿಲಿಯನ್ ಜಿಮೇಲ್ ಬಳಕೆದಾರರಿಗೆ ಪಾಸ್‌ವರ್ಡ್‌ಗಳನ್ನು ಬದಲಾಯಿಸುವಂತೆ ಗೊಗಲ್ ನಿಂದ ಎಚ್ಚರಿಕೆ ನೀಡಲಾಗಿದೆ.

ಸೈಬರ್ ಭದ್ರತೆಯನ್ನು ಬಲಪಡಿಸಲು ೨.೫ ಬಿಲಿಯನ್ Gmail ಬಳಕೆದಾರರಿಗೆ ತಕ್ಷಣವೇ ತಮ್ಮ ಪಾಸ್‌ವರ್ಡ್ ಬದಲಾಯಿಸುವಂತೆ ಗೂಗಲ್ ಸೂಚಿಸಿದೆ.
ಎರಡು ಹಂತದ ಪರಿಶೀಲನೆಯನ್ನು(೨ ಎಸ್ ವಿ ) ಸಕ್ರಿಯಗೊಳಿಸುವುದು ಕಡ್ಡಾಯವಾಗಿದೆ ಎಂದು ಅದು ಹೇಳಿದೆ. ಹ್ಯಾಕರ್‌ಗಳು ನಕಲಿ ಇಮೇಲ್‌ಗಳೊಂದಿಗೆ ಬಳಕೆದಾರರನ್ನು ಬೇರೆ ಲಾಗಿನ್ ಪುಟಕ್ಕೆ ಮರುನಿರ್ದೇಶಿಸುತ್ತಿದ್ದಾರೆ.
ಭದ್ರತಾ ಕೋಡ್‌ಗಳು ಸೇರಿ ಪ್ರಮುಖ ಮಾಹಿತಿ ಕದಿಯುತ್ತಿದ್ದಾರೆ ಎಂದು ಗೂಗಲ್ ಹೇಳಿದೆ. ಇದರ ಹಿಂದೆ ಶೈನಿಹಂಟರ್ಸ್ ಎಂಬ ಗ್ಯಾಂಗ್ ಇದೆ ಎಂದು ತಿಳಿಸಲಾಗಿದೆ.