“ಅಮ್ಮಣಗಿ ಗ್ರಾಮದಲ್ಲಿ  ಕೇಂದ್ರಿಯ ರೇಷ್ಮೆ ಮಂಡಳಿ ರಾಯಾಪೂರ ಅವರ ಆಯೋಜೀಸಿದ   “ನನ್ನ ರೇಷ್ಮೆ ನನ್ನ ಹೆಮ್ಮೆ” ಕಾರ್ಯಕ್ರಮ”

ಹುಕ್ಕೇರಿ :–

ರೇಷ್ಮೆ  ಗೂಡು ಉತ್ಪಾದನೆಯಲ್ಲಿ  ಗ್ರಾಮೀಣ ಜನರು ಹೇಚ್ಚು ರೇಷ್ಮೆ ಬೇಸಾಯ ಮಾಡಿಕೋಳಬೇಕು  ಇದರಿಂದ ರೈತರು  ಆರ್ಥಿಕವಾಗಿ  ಸದೃಡವಾಗುತ್ತಾರೆ  ಎಂದು ಬೆಳಗಾವಿ  ರೇಷ್ಮೆ ಜಂಟಿ ನಿರ್ಧೇಶಕರಾದ ಮಹೇಶಕುಮಾರ ವಾಗೆ ಹೇಳಿದರು.  

      ಸೋಮವಾರ ತಾಲುಕಿನ  ಅಮ್ಮಣಗಿ ಗ್ರಾಮದಲ್ಲಿ  ಕೇಂದ್ರಿಯ ರೇಷ್ಮೆ ಮಂಡಳಿ ರಾಯಾಪೂರ ಅವರ ಆಯೋಜೀಸಿದ   “ನನ್ನ ರೇಷ್ಮೆ ನನ್ನ ಹೆಮ್ಮೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು  ರೇಷ್ಮೆ ಹುಳುಗಳಿಗೆ ಗುಣಮಟ್ಟದ ಸೊಪ್ಪು, ಉತ್ತಮ ವಾತಾವರಣವಿದ್ದರೆ ಗುಣಮಟ್ಟದ ಬೆಳೆ ಬರುತ್ತದೆ, ರೇಷ್ಮೆ ಕೃಷಿಯಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲು ಇಲಾಖೆಯಿಂದ

ರೈತರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ   ರೇಷ್ಮೆ ಬೆಳೆಗಾರರು ರೇಷ್ಮೆ ಹುಳುಗಳಿಗೆ ಗುಣಮಟ್ಟದ ಸೊಪ್ಪು, ಉತ್ತಮ ವಾತಾವರಣ ಬೇಕಾಗುತ್ತದೆ. ರೇಷ್ಮೆ ತೋಟವನ್ನು ಗುಣಮಟ್ಟದ ನಿರ್ವಹಣೆ ಮಾಡಿದರೆ ಗುಣಮಟ್ಟದ ಬೆಳೆ ಬರುತ್ತದೆ ತೋಟ ನಿರ್ವಹಣೆಯಲ್ಲಿ ನಮ್ಮ ರೈತರು ಎಡವುತ್ತಿದ್ದಾರೆ. ಆಧುನಿಕ ರೇಷ್ಮೆ ಕೃಷಿ ವಿಧಾನದಲ್ಲಿ ರೈತರು ಅತಿಯಾಗಿ, ಯೂರಿಯಾ ರಸಗೊಬ್ಬರ, ಕೀಟನಾಶಕ, ಕಳೆನಾಶಕ ಬಳಸುತ್ತಿರುವುದರಿಂದ ಭೂಮಿ ಫಲವತ್ತತೆ ಕಳೆದುಕೊಂಡು ಬರಡಾಗುತ್ತಿದೆ ಹಾಗೂ ರೇಷ್ಮೆ ಕೃಷಿಯಲ್ಲಿ ನಾವು ಪ್ರಗತಿಯನ್ನು ಸಾಧಿಸಬೇಕಾದರೆ ರೈತರು ರೇಷ್ಮೆ ಇಲಾಖೆಯ ಮಾರ್ಗದರ್ಶನದಲ್ಲಿ ತೋಟ ನಿರ್ವಹಣೆ ಮಾಡಬೇಕು.

ಅತಿಯಾಗಿ ರಸಗೊಬ್ಬರ ಮತ್ತು ಕೀಟ ನಾಶಕಗಳನ್ನು ಬಳಕೆ ಮಾಡದೆ, ಕೊಟ್ಟಿಗೆ ಗೊಬ್ಬರ ನೀಡಿ ಸಾವಯವ  ಕೃಷಿ ಮಾಡಬೇಕೇಂದು  ಹೇಳಿದರು.

ಕೇಂದ್ರೀಯ ರೇಷ್ಮೆ ಮಂಡಳಿ ಜಂಟಿ ನಿರ್ಧೇಶಕರಾದ  ಶಿವಕುಮಾರ ಮುರಗೂಡ  ಮಾತನಾಡಿ, ರೇಷ್ಮೆ ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ನೂತನ ತಂತ್ರಜ್ಞಾನ ಹಾಗೂ ರೇಷ್ಮೆ ತಳಿಗಳನ್ನು ಅವಿಷ್ಕಾರ ಮಾಡಲಾಗಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ  ರೇಷ್ಮೆ ಮಂಡಳಿ ವಿಜ್ಞಾನಿಯಾದ ಆಶಾ   ರೇಷ್ಮೆ  ಸಹಾಯಕ ನಿರ್ಧೇಶಕರಾದ  ಪಿ ಎಮ್ ವಿಮನಗೌಡರ   ಹುಕ್ಕೇರಿ ರೇಷ್ಮೆ  ವಿಸ್ತರಣಾಧಿಕಾರಿಗಳಾದ ಆಕಾಶರಾಜ ನಡುವಿನಮನಿ ರೇಷ್ಮೆ ನಿರೀಕ್ಷಕಾರದ   ಎಮ್ ಬಿ ಹಿರೇಮಠ ಹಾಗೂ ತಾಂತ್ರಿಕ ಸೇವಾ ಕೇಂದ್ರ ಹುಕ್ಕೇರಿ ಸಿಬ್ಬಂದಿಗಳಾದ ಪಿ ಬಿ ಸಣ್ಣನಾಯಿಕ  ಎಮ್ ಬಿ ದೇಸಾಯಿ ಉಪಸ್ಥಿರಿದ್ದರು.

Share this post:

Leave a Reply

Your email address will not be published. Required fields are marked *

You cannot copy content of this page