ಬೆಂಗಳೂರು :–
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ರಾಜಕೀಯ ಕ್ರಾಂತಿ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆಯೂ ಶ್ರೀ ಸಿದ್ದರಾಜು ಸ್ವಾಮೀಜಿಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ “ಬಂಡೆ” ಗಿಂತ ಭದ್ರವಾಗಿದೆ ಎಂದು ಹೇಳುವ ಮೂಲಕ ಈ ಅವಧಿಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲ್ಲ ಎಂಬ ಸುಳಿವು ನೀಡಿದ್ದಾರೆ.
ಅಕ್ಟೋಬರ್ 28ರ ನಂತರ ರಾಜ್ಯ ರಾಜಕಾರಣದಲ್ಲಿ ಸಂಘರ್ಷ ಏರ್ಪಡಲಿದ್ದು, ಫೆಬ್ರವರಿಯಲ್ಲಿ ಇದೆಲ್ಲವೂ ಅಂತ್ಯವಾಗಲಿದೆ ಎಂದು ಪಾಲನಹಳ್ಳಿ ಮಠದ ಶ್ರೀ ಸಿದ್ದರಾಜು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಏನೇ ತಿಕ್ಕಾಟವಾದ್ರೂ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ನಾಡದೊರೆಗೆ ಯಾವುದೇ ಕಂಟಕ ಇಲ್ಲ. ಯಾವುದೇ ಪ್ರಭಾವಿ ನಾಯಕರು ಸಿಎಂ ಕುರ್ಚಿ ಕಸಿದುಕೊಳ್ಳಲು ಪ್ರಯತ್ನಿಸಿದರೂ ಅದು ಫಲಪ್ರದವಾಗಲ್ಲ. ಇದೆಲ್ಲವೂ ಕಾಲಚಕ್ರ ಎಂದು ಪಾಲನಹಳ್ಳಿ ಮಠದ ಶ್ರೀ ಸಿದ್ದರಾಜು ಸ್ವಾಮೀಜಿಗಳು ಹೇಳಿದ್ದಾರೆ.

ಋತು ಚಕ್ರ ಮತ್ತು ಗ್ರಹಗತಿ ಆಧಾರದ ಮೇಲೆ ಪ್ರಾಚೀನರು ಈ ಕಾಲಚಕ್ರವನ್ನು ಅನ್ವೇಷಿಸಿದ್ದಾರೆ.
ಈ ಕಾಲಚಕ್ರ ಮನುಷ್ಯನ ಸುಖ-ದುಃಖ, ಪ್ರವಾಹ, ಪ್ರಕೃತಿ ವಿಕೋಪ ಸೇರಿದಂತೆ ಇತ್ಯಾದಿ ವಿಷಯಗಳ ಕುರಿತು ಭವಿಷ್ಯವನ್ನು ಹೇಳುತ್ತದೆ. ಈ ಸಂವತ್ಸರ ಹಲವು ವೈಶಿಷ್ಟ್ಯಗಳಿಂದ ಕೂಡಿದ್ದು, ರಾಶಿಯ ಸಂಕೇತದಂತೆ ಅಧಿಕಾರದ ವ್ಯತ್ಯಾಸಗಳಾಗುತ್ತವೆ ಎಂದು ಹೇಳಿದರು.





