ಬೆಂಗಳೂರು :–
ಶಾಸಕರ ಕ್ಷೇತ್ರಾಭಿವೃದ್ಧಿಗೆ ತಲಾ ₹50 ಕೋಟಿ ನೀಡಲು ಸಿಎಂ ಸಿದ್ದರಾಮಯ್ಯ ಒಪ್ಪಿಗೆ; ರಸ್ತೆ ನಿರ್ಮಾಣಕ್ಕೆ ಬಳಸಲು ಸೂಚನೆ

ಶಾಸಕರೊಂದಿಗೆ ಬುಧವಾರ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಕ್ಷೇತ್ರಾಭಿವೃದ್ಧಿಗಾಗಿ ತಲಾ ₹50 ಕೋಟಿ ಅನುದಾನ ನೀಡದಲು ಒಪ್ಪಿಗೆ ಸೂಚಿಸಿದ್ದು,
ಈ ಅನುದಾನವನ್ನು “ನೂತನ ರಸ್ತೆ ನಿರ್ಮಾಣ, ರಸ್ತೆ ದುರಸ್ತಿ ಸೇರಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ” ಬಳಸಲು ಸೂಚನೆ ನೀಡಿದ್ದಾರೆ.
ಹಣ ಬಿಡುಗಡೆ ಮಾಡಲು ಕಾಮಗಾರಿ ವಿವರ ನೀಡುವಂತೆ ಎಲ್ಲಾ ಶಾಸಕರಿಗೆ ಇತ್ತೀಚಿಗೆ ಸಿಎಂ ಪತ್ರ ಬರೆದಿದ್ದರು.
ಜನರ ಜೀವನಮಟ್ಟ ಸುಧಾರಣೆಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.





