“೧೦ನೇ ರಾಷ್ಟೀಯ ಆಯುರ್ವೇದ ದಿನಾಚರಣೆ ಪ್ರಯುಕ್ತ ವಾಕ್‌ಥಾನ್”

ಚಿಕ್ಕೋಡಿ :–


ಆಯುರ್ವೇದವು ಆರೋಗ್ಯ ಕಾಪಾಡುವ ಹಾಗೂ ರೋಗ ನಿವಾರಣೆಗೆ ಮಾರ್ಗದರ್ಶಿಯಾದ ಪ್ರಾಚೀನ ವೈದ್ಯಕೀಯ ಪದ್ಧತಿ, ಸಮಾಜದಲ್ಲಿ ನೈಸರ್ಗಿಕ ಚಿಕಿತ್ಸೆ ವಿಧಾನಗಳನ್ನು ಅನುಸರಿಸುವುದು ಅತ್ಯಂತ ಅಗತ್ಯ” ಎಂದು ಕೆ ಎಲ್ ಇ ಯ ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಕಿರಣ ಮುತ್ನಾಳಿ ಹೇಳಿದರು.

ಪಟ್ಟಣದ ಕೆ ಎಲ್ ಇ ಆಯುರ್ವೇದ ವೈದ್ಯಕೀಯ ಕಾಲೇಜು ಆವರಣದಲ್ಲಿ ೧೦ನೇ ರಾಷ್ಟ್ರೀಯ ಆಯುರ್ವೇದ ದಿನದ ನಿಮಿತ್ತ ಏರ್ಪಡಿಸಿದ ವಾಕ್‌ಥಾನ್‌ಗೆ ಚಾಲನೆ ನೀಡಿ ಮಾತನಾಡುತ್ತಾ ಈ ವರ್ಷದ ಆಯುರ್ವೇದ ದಿನದ ಧೇಯ್ಯ ವಾಕ್ಯವು “ಆಯುರ್ವೇದವು ಜನರಿಗೆ ಮತ್ತು ಭೂಮಿಯ ಕಲ್ಯಾಣಕ್ಕಾಗಿ” ವಾಗಿದೆ. ಆಯುರ್ವೇದದ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶ ಹೊಂದಿದೆ. ಈ ವರ್ಷ ಇದನ್ನು ಸೆಪ್ಟೆಂಬರ್ ೨೩ ರಂದು ಆಯುಷ ಸಚಿವಾಲಯದ ಮಾರ್ಗದರ್ಶನದಲ್ಲ್ಲಿ ಆಚರಿಸಲಾಯಿತ್ತು. ಆಯುರ್ವೇದವು ಕೇವಲ ಚಿಕಿತ್ಸೆಗಾಗಿ ಮಾತ್ರವಲ್ಲದೆ,

ಆರೋಗ್ಯಕರ ಜೀವನ ಶೈಲಿ ಹಾಗೂ ದೀರ್ಘಾಯುಷ್ಯಕ್ಕಾಗಿ ಸಹ ಅನಿವಾರ್ಯವಾದ ಪಾಠಗಳನ್ನು ನೀಡುತ್ತದೆ. ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಂ, ಆತುರಸ್ಯ ವಿಕಾರ ಪ್ರಶಮನಂ ಎಂಬುದು ಆಯುರ್ವೇದದ ಮೂಲ ತತ್ವವಾಗಿದ್ದು, ಪ್ರತಿಯೊಬ್ಬರೂ ದಿನನಿತ್ಯದ ಜೀವನದಲ್ಲಿ ಆಯುರ್ವೇದೀಯ ಕ್ರಮಗಳನ್ನು ಅಳವಡಿಸಿಕೊಂಡರೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ” ಎಂದರು.
ವಾಕ್‌ಥಾನ್: ವಿದ್ಯಾರ್ಥಿಗಳು ಆಯುರ್ವೇದ ಕುರಿತು ಘೋಷಣೆಗಳನ್ನು ಕೂಗುತ್ತಾ ಆಸ್ಪತ್ರೆಯಿಂದ ಪ್ರಾರಂಭಿಸಿ ಚಿಕ್ಕೋಡಿ ಬಸ ನಿಲ್ದಾಣದ ಮತ್ತು ಪ್ರಮುಖ ಬೀದಿಗಳಲ್ಲಿ ಜನಜಾಗೃತಿ ರ‍್ಯಾಲಿಯನ್ನು ಕಾಲೇಜಿನಲ್ಲಿ ಮುಕ್ತಾಯಗೊಳಿಸಲಾಯಿತು.
ಅದೇ ರೀತಿ ೨೨ ರಂದು ರಾಷ್ಟ್ರೀಯ ಆಯುರ್ವೇದ ದಿನದ ನಿಮಿತ್ತ ಆರೋಗ್ಯ ಮೇಳ, ಔಷಧಿಸಸ್ಯಗಳ ಪ್ರದರ್ಶನ, ಆಯುರ್ವೇದ ಔಷಧಿಗಳ ಮಳಿಗೆ ಹಾಗೂ ಯೋಗಾಸನ ಇವುಗಳ ಪ್ರದರ್ಶನ ಏರ್ಪಡಿಸಲಾಗಿತ್ತು ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದ್ದು, ಅನೇಕ ರೋಗಿಗಳಿಗೆ ಔಷಧಿ ವಿತರಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಡಾ. ಪಿ ವಿ ಜವಳಿ ಮಾತನಾಡಿದರು ಕಾರ್ಯಕ್ರಮವನ್ನು ಡಾ. ಹೊನವಾಡ ನಿರುಪಿಸಿದದು ಹಾಗೂ ವಂದರ್ನಾಪನೆಯನ್ನು ಡಾ. ಸಂತೋಷ ನೆರವೆರಿಸಿದರು. ಇದೇ ಸಮಯದಲ್ಲಿ ಕೆ ಎಲ್ ಇ ಆಯುರ್ವೇದ ಕಾಲೇಜಿನ ಉಪನ್ಯಾಸಕರು, ವೈದ್ಯರು, ಹಾಗೂ ೨೫೦ ವಿದ್ಯಾರ್ಥಿಗಳು ಇತರೆ ಸಿಬ್ಬಂದಿ ವರ್ಗದವರು ವಾಕ್‌ಥಾನಲ್ಲಿ ಪಾಲ್ಗೊಂಡಿದ್ದರು.

Share this post:

Leave a Reply

Your email address will not be published. Required fields are marked *

You cannot copy content of this page