೧೨ ವರ್ಷದ ಬಾಲಕಿಯೊಬ್ಬಳು ತನ್ನ ಜಡೆಯಲ್ಲಿ ಅಳಿಲನ್ನು ಅಡಗಿಕೊಂಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಹುಡುಗಿ ಎಂದಿನಂತೆ ಶಾಲೆಗೆ ಹೋಗಿದ್ದಳು. ಆದರೆ, ಮನೆಗೆ ಬಂದ ನಂತರ, ತನ್ನ ಕುಟುಂಬ ಸದಸ್ಯರಿಗೆ ತನ್ನ ಜಡೆಯಿಂದ ಏನೋ ವಿಚಿತ್ರ ಬರುತ್ತಿದೆ ಎಂದು ತಿಳಿಸಿದಳು.
ಆಕೆಯ ತಂದೆ ಮಗಳ ಜಡೆಯನ್ನು ಬಿಚ್ಚಿದಾಗ, ಒಳಗೆ ಒಂದು ಸಣ್ಣ ಅಳಿಲು ಕಂಡುಬಂದಿತು.

ಇದನ್ನು ನೋಡಿ ಕುಟುಂಬ ಸದಸ್ಯರು ಆಘಾತಕ್ಕೊಳಗಾಗಿದ್ದಾರೆ. ವಿಡಿಯೋಗೆ ನೆಟ್ಟಿಗರು ತಮಾಷೆಯ ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.





