ಚಿಕ್ಕೋಡಿ :–
ನಗರದ ಪ್ರತಿಷ್ಠಿತ ಕೆ. ಎಲ್. ಇ. ಸಂಸ್ಥೆಯ ಚಿದಾನಂದ ಬಿ ಕೋರೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ೨ ಅಕ್ಟೋಬರ ೨೦೨೫ ರಂದು ಚಿದಾನಂದ ಬಿ. ಕೋರೆಯವರ ಹಾಗೂ ಗಾಂಧೀಜಿ ಮತ್ತು ಲಾಲಬಹದ್ದೂರ ಶಾಸ್ತ್ರಿಜಿ ಯವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಕೆ. ಎಲ್. ಇ. ಸಂಸ್ಥೆಯ ಚಿದಾನಂದ ಬಿ. ಕೋರೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ|| ದರ್ಶನಕುಮಾರ ಬಿಳ್ಳೂರರವರು ಹಾಗೂ ಕೆ. ಎಲ್. ಇ. ಸಂಸ್ಥೆಯ ಆರ್ಯುವೇಧಿಕ ಮಹಾವಿದ್ಯಾಲಯದ ಡಾ|| ಕಿರಣಕುಮಾರ ಮುತ್ತನಾಳೆ ಇವರ ಸಾರಥ್ಯದಲ್ಲಿ ಮುಂಜಾನೆ ಚಿದಾನಂದ ಬಿ. ಕೋರೆಯವರ ಹಾಗೂ ಗಾಂಧೀಜಿ ಮತ್ತು ಲಾಲಬಹದ್ದೂ ಶಾಸ್ತ್ರೀಜಿ ಯವರ ಭಾವಚಿತ್ರಗಳ ಪೂಜೆಯನ್ನು ನೇರೆವೇರಿಸುವ ಮೂಲಕ ಚಾಲನೆ ನೀಡಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ದರ್ಶನಕುಮಾರ ಬಿಳ್ಳೂರರವರು ತಮ್ಮ ಭಾಷಣದಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಲಾಲಬಹದ್ದೂರ ಶಾಸ್ತಿçಯ
ಶಾಸ್ತ್ರೀಜಿ ಯವರ ತತ್ವಗಳನ್ನು ತಿಳಿಸುತ್ತಾ, ಚಿದಾನಂದ ಬಿ. ಕೋರೆಯವರ ಕೃಷಿ ಕ್ಷೇತ್ರ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಕೊಡುಗೆಗಳನ್ನು ಶ್ಲಾಘಿಸಿದರು.
ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂಧದವರು ಈ ಮೂವರು ಮಹಾತ್ಮರ ಜನ್ಮದಿನಾಚರಣೆಯನ್ನು ಆಚರಿಸಿದರು.





