ಚಿಕ್ಕೋಡಿ :–
ತಾಲೂಕಾ
ತಾಲುಕಿನ ಆರೋಗ್ಯಾಧಿಕಾರಿಗಳ ಕಚೇರಿ ಚಿಕ್ಕೋಡಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ ಬಹಾದ್ದೂರ್ ಶಾಸ್ತ್ರಿ ಜೀ ಯವರ ಜಯಂತಿನ್ನು ಆಚರಿಸಲಾಯಿತು.
ದಿನಾಂಕ: ೦೨.೧೦.೨೦೨೫ ರಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ರಾಷ್ಟಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ ಬಹಾದ್ದೂರ್ ಶಾಸ್ತ್ರಿಜಿ ಯವರ ಭಾವ ಚಿತ್ರಕ್ಕೆ ತಾಲೂಕಾ ಆರೋಗ್ಯಾಧಿಕಾರಿ ಡಾ|| ರಜೇಂಧ್ರ ಎಸ್ ಖನದಾಳೆ ಪೂಜೆ ಸಲ್ಲಿಸಿ.

ಮಹಾತ್ಮ ಗಾಂಧೀಜಿಯವರು ಅಕ್ಟೋಬರ್ ೨ ೧೮೬೯ರಲ್ಲಿ ಪೋರಬಂದರದಲ್ಲಿ ಜನಿಸಿದರು.ಮಹಾತ್ಮ ಗಾಂಧೀಜಿಯವರು ಬ್ರಿಟಿಷರ ಆಡಳಿತದ ವಿರುದ್ದ ಭಾರತದ ಸ್ವಾತಂತ್ರ್ಯದ ಚಳವಳಿಯ ಮಹಾನ ನಾಯಕರಲ್ಲಿ ಒಬ್ಬರು. ಗಾಂಧೀಜಿ ಪ್ರಪಂಚದಾದ್ಯಂತ ನಾಗರಿಕ ಹಕ್ಕುಗಳು ಮತ್ತು ಸ್ವಾತಂತ್ರö್ಯ ಚಳುವಳಿಗಳನ್ನು ಪ್ರೇರೇಪಿಸಿದರು. ಇನ್ನೋರ್ವ ಮಹಾನ ವ್ಯಕ್ತಿ “ಜೈ ಜವಾನ ಜೈ ಕಿಸಾನ” ಎಂಬ ಘೋಷಣೆಯೊಂದಿಗೆ ರೈತರ-ಯೋದರ ಮಹತ್ವವನ್ನು ಸಾರಿದ ಮಾಜಿ ಪ್ರಧಾನಮಂತ್ರಿಗಳಾದ ಲಾಲ ಬಹಾದ್ದೂರ್ ಶಾಸ್ತಿಜಿ ಯವರ ಜಯಂತಿಯ ಪ್ರಯುಕ್ತ ಅವರ ಆದರ್ಶವನ್ನು ಎಲ್ಲರೂ ಪಾಲಿಸೋನಾ ಎಂದು ಹೆಳಿದರು.
ಈ ಸಂದಆರ್ಭದಲ್ಲಿ ಡಾ.ಯಶೋಧಾ ಬಬಲಿ. ಡಾ.ಮಂಗಲ ಶಾಸ್ತ್ರಿ ಡಾ.ವಿದ್ಯಾ ಪಾಟೀಲ ಡಾ.ರಾಜಕುಮಾರ ಮನಗುತ್ತಿ ಡಾ.ರಾಮಪ್ಪ ಮದಿಹಳ್ಳಿ ಡಾ. ಪ್ರೀಯಾಂಕಾ ಧಡಕೆ ಡಾ.ಗೀತಾ ನೀಲಜಗಿ ಡಾ.ಸವೀತಾ ವಡ್ಡರ ಚಿದಾನಂದ ಕಲಾದಗಿಮಠ ರಾಜು ದತ್ತವಾಡೆ ಸಿದ್ದೇಶ್ವರ ಬ್ಯಾಕುಡ ಸದಾಶಿವ ಅಸೋಡೆ ರಣು ಲಬ್ಬಿ ಸುಮನ ಪೂಜೇರಿ ಪ್ರೀತಿ ಘಾಗರೆ ಸುವರ್ಣಾ ಪ್ರಧಾನ ಜಯಶೀಲಾ ಡಿ ಮಹಾದೇವಿ ಪಾತರವಾಟ ಗಣೇಶ ಕುದನೋರೆ ಪ್ರದೀಪ ತಳವಾರ ಸಿದ್ದಾರೋಡ ನವಾಡೆ ಹಾಗೂ ಎಲ್ಲ ಸಿಬ್ಬಂದಿಯವರು ಹಾಜರಿದ್ದರು





