ತಜ್ಞರ ಅಭಿಪ್ರಾಯ ಪ್ರಕಾರ ಯಾವ ಆರೋಗ್ಯ ಸಮಸ್ಯೆಗಳಿರುವವರು ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯಬಾರದು
ಒಸಡು ಕಾಯಿಲೆ, ಬಾಯಿ ಹುಣ್ಣು, ಬಾಯಿಯ ಕ್ಯಾನ್ಸರ್ ಸೇರಿ ಬಾಯಿ ಅಥವಾ ದಂತ ಸಂಬಂಧಿತ ಕಾಯಿಲೆಗಳಿರುವವರು ಖಾಲಿ ಹೊಟ್ಟೆಯಲ್ಲಿ ನೇರವಾಗಿ ನೀರು ಕುಡಿಯುವುದನ್ನು ತಪ್ಪಿಸಬೇಕು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ನೀರಿನೊಂದಿಗೆ ಲಾಲಾರಸವನ್ನು ನುಂಗಿದರೆ, ಹಾನಿಕಾರಕ ಅಂಶಗಳು ದೇಹವನ್ನು ಪ್ರವೇಶಿಸಬಹುದು ಎಂದು ಎಚ್ಚರಿಕೆ ಎಂದು ಹೇಳಿದರು.
ಸದರಿ ಸಮಸ್ಯೆಗಳು ಇರುವವರು ನೀರು ಕುಡಿಯುವ ಮೊದಲು ಬಾಯಿಯನ್ನು ಚೆನ್ನಾಗಿ ತೊಳೆಯಬೇಕು ಎಂದು ತಜ್ಞರು ಸಲಹೆಯನ್ನು ನೀಡಿದರು.





