ಬೆಂಗಳೂರು :–
ಮಹಾರಾಷ್ಟ್ರದ ನಾಸಿಕ್‌ನಲ್ಲಿ ಇತ್ತೀಚಿಗೆ 58 ವರ್ಷದ ವ್ಯಕ್ತಿಯೊಬ್ಬ ತನ್ನ 80 ವರ್ಷದ ತಾಯಿಯನ್ನೇ ಕತ್ತು ಹಿಸುಕಿ ಕೊಂದ ಘಟನೆ ಬೆಳಕಿಗೆ ಬಂದಿದೆ.

ವರದಿಗಳ ಪ್ರಕಾರ, ಕೊಲೆಯ ನಂತರ ಆರೋಪಿ ಅರವಿಂದ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದು, ನನಗೆ ಬೋರ್ ಆಗುತ್ತಿತ್ತು, ಅದಕ್ಕೆ ನಾನು ತಾಯಿಯನ್ನು ಕೊಂದೆ. ಈಗ ನನ್ನನ್ನು ಬಂಧಿಸಿ ಎಂದು ಪೊಲೀಸರಿಗೆ ಹೇಳಿದ್ದಾನೆ.
ಆರೋಪಿ ಅರವಿಂದ್ ಮಾನಸಿಕ ಅಸ್ವಸ್ಥನಾಗಿದ್ದು, ಆತನ ಪತ್ನಿ ಕೆಲವು ಸಮಯದ ಹಿಂದೆ ಆತನನ್ನು ತೊರೆದಿದ್ದಳು ಎಂದು ವರದಿಯಾಗಿವೆ.





