ಬೆಂಗಳೂರು :–
ಯು ಪಿ ರಾಜ್ಯದ ಅಜಮ್‌ಗಢದಲ್ಲಿ, ಜಾಮೀನಿನ ಮೇಲೆ ಬಿಡುಗಡೆಯಾದ ಕೈದಿ ರಾಮ್‌ಜೀತ್ ಯಾದವ್, ಜೈಲು ಸಿಬ್ಬಂದಿ ಮತ್ತು ಇನ್ನೊಬ್ಬ ಕೈದಿಯೊಂದಿಗೆ ಸೇರಿ ಜೈಲಿನ ಬ್ಯಾಂಕ್ ಖಾತೆಯಿಂದ ₹ ೫೨.೮೫ ಲಕ್ಷ ಹಣ ಕದ್ದಿದ್ದಾನೆ.

ಜೈಲಿನಿಂದ ಹೊರಬಂದ ನಂತರ ಮೂರಿಂದ ನಾಲ್ಕು ಚೆಕ್ ಬುಕ್‌ಗಳನ್ನು ಕದ್ದು ತಿಂಗಳುಗಳ ಕಾಲ ಹಣವನ್ನು ವಿತ್‌ಡ್ರಾ ಮಾಡಿದ್ದಾನೆ.
ಈ ಸಮಯದಲ್ಲಿ, ಅವನು ತನ್ನ ತಂಗಿಯ ಮದುವೆಗೂ ₹25 ಲಕ್ಷ ಖರ್ಚು ಮಾಡಿದ್ದಾನೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.





