ವಂದೇ ಭಾರತ್ ಸ್ಟೀಪರ್ ರೈಲಿನಲ್ಲಿ ಸ್ವಯಂಚಾಲಿತ ಬಾಗಿಲುಗಳು, ಆರಾಮದಾಯಕವಾದ ಮಲಗುವ ಸ್ಥಳಗಳು, ವೈ-ಫೈ ಸೇವೆ ಹಾಗೂ ವಿಮಾನದ ಕ್ಯಾಬಿನ್‌ನ ಒಳಾಂಗಣದ ಹೋಲಿಕೆ ಇದೆ.
ಸುಮಾರು ೧,೧೨೮ ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಈ ರೈಲು, ಕ್ರಾಶ್ ಬಫರ್‌ಗಳು, ಡಿಫಾರ್ಮೇಷನ್ ಟ್ಯೂಬ್‌ಗಳು ಮತ್ತು ಕೋಚ್‌ಗಳ ನಡುವೆ ಬೆಂಕಿ-ನಿರೋಧಕ ಗೋಡೆಗಳನ್ನು ಹೊಂದಿದೆ.
ರೈಲಿನ ಗರಿಷ್ಠ ವೇಗ ಗಂಟೆಗೆ ಸುಮಾರು ೧೮೦ ಕಿ.ಮೀ ಆಗಿದ್ದು, ಕಾರ್ಯಾಚರಣೆಯ ವೇಗ ಗಂಟೆಗೆ ೧೬೦ ಕಿ.ಮೀ ಇರುತ್ತದೆ.





