ಬೆಂಗಳೂರು :–
ಮಹಾರಾಷ್ಟ್ರದ ರತ್ನಗಿರಿಯಲ್ಲಿ ಅಪ್ರಾಪ್ತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಗುರುಕುಲದ ಮುಖ್ಯಸ್ಥ ಭಗವಾನ್ ಕೊಕರೆ ಮಹಾರಾಜ್ ಹಾಗೂ ಪ್ರಿತೇಶ್ ಪ್ರಭಾಕರ್ ಎಂಬ ಶಿಕ್ಷಕನನ್ನು ಬಂಧಿಸಲಾಗಿದೆ.
ಜೂನ್ ೧೨ ರಂದು ಗುರುಕುಲಕ್ಕೆ ಸೇರಿದ ವಿದ್ಯಾರ್ಥಿನಿಯ ಕೋಣೆಗೆ ನುಗ್ಗಿದ್ದ ಭಗವಾನ್ ಕೊಕರೆ, ಆಕೆಯ ಎದೆ ಸೇರಿದಂತೆ ದೇಹದ ಇತರ ಭಾಗಗಳನ್ನು ಮುಟ್ಟಿ ಅಸಭ್ಯವಾಗಿ ಸ್ಪರ್ಶಿಸಿದ್ದ ಎಂದು ವರದಿಯಾಗಿತ್ತು.
ಇದನ್ನು ಶಿಕ್ಷಕ ಪ್ರಿತೇಶ್‌ಗೆ ತಿಳಿಸಿದಾಗ ಆತ ಅಂಜಿಕೆ ಹಾಕಿದ್ದ ಎಂದು ಸಂತ್ರಸ್ತೆ ತಿಳಿಸಿದ್ದಾಳೆ.





