ಬೆಂಗಳೂರು :–
ಸರ್ಕಾರದ ಸೈಬರ್ ಭದ್ರತಾ ಸಂಸ್ಥೆಯು ಉಚಿತ ವೈ-ಫೈ ಬಳಸುವ ಬಗ್ಗೆ ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಬಸ್, ರೈಲು ನಿಲ್ದಾಣ, ಕೆಫೆ, ರೆಸ್ಟೋರೆಂಟ್‌ಗಳಲ್ಲಿನ ಉಚಿತ ವೈ-ಫೈ ನೆಟ್‌ವರ್ಕ್‌ಗಳಲ್ಲಿ ಯಾವುದೇ ವಿಶೇಷ ಭದ್ರತಾ ಫಿಲ್ಟರ್‌ಗಳು ಇರುವುದಿಲ್ಲ.

ನೀವು ಸದರಿ ನೆಟ್‌ವರ್ಕ್ ಗಳಿಗೆ ಸಂಪರ್ಕಗೊಂಡ ತಕ್ಷಣ, ನಿಮ್ಮ ಫೋನ್, ಲ್ಯಾಪ್‌ಟಾಪ್‌ನ ಪಾಸ್‌ವರ್ಡ್, ಬ್ಯಾಂಕಿಂಗ್ ಮಾಹಿತಿ, ಇಮೇಲ್ ಹಾಗೂ ಇತರ ವೈಯಕ್ತಿಕ ಡೇಟಾವನ್ನು ಸೈಬರ್ ಅಪರಾಧಿಗಳು ಹ್ಯಾಕ್ ಮಾಡಬಹುದು ಎಂದು ಭದ್ರತಾ ಸಂಸ್ಥೆ ತಿಳಿಸಿದೆ.





