ಚಿಕ್ಕೋಡಿ :–
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕಳೆದ ಅಗಸ್ಟ್ 2025 ರಲ್ಲಿ ನಡೆಸಿದ 2023-25ನೇ ಸಾಲಿನ ಎಂ.ಎಡ್ ಅಂತಿಮ ವರ್ಷದ ಫಲಿತಾಂಶ ಪ್ರಕಟಿಸಿದ್ದು ಸ್ಥಳೀಯ ಶಿಕ್ಷಣ ಮಹಾವಿದ್ಯಾಲಯವು ಶೇಕಡ 100ರಷ್ಟು ಫಲಿತಾಂಶ ದಾಖಲಿಸುವುದರ ಮೂಲಕ ಉತ್ತಮ ಸಾಧನೆ ಮಾಡಿದ್ದು. ಮಹಾವಿದ್ಯಾಲಯದ ಪ್ರ ಶಿಕ್ಷಣಾರ್ಥಿಗಳಾದ ಹೇಮಲತಾ ಪೂಜಾರಿ ಶೇಕಡ 78% ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ
ಜ್ಯೋತಿ ಪಾಟೀಲ್ ಶೇಕಡ,77% ದ್ವಿತೀಯ ಸ್ಥಾನ, ರಾವುತಪ್ಪ ಹಿರಾಕಲ್ ಶೇಕಡ 76.5% ತೃತೀಯ ಸ್ಥಾನ ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ ಹಾಗೆಯೇ ಪ್ರತಿಶತ 93 ರಷ್ಟು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಹಾಗೂ ಪ್ರತಿಶತ 7% ರಷ್ಟು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.ಇವರ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಸುರೇಂದ್ರನಾಥ್ ಟಿ ಚೌಗುಲೆ ಹಾಗೂ ಸಂಸ್ಥೆಯ ಚೇರ್ ಪರ್ಸನರಾದ ಶ್ರೀಮತಿ ಶಕುಂತಲಾ ಟಿ ಚೌಗುಲೆ ಚೌಸನ್ ನರ್ಸರಿ ಶಾಲೆಯ ನಿರ್ದೇಶಕರಾದ ಸವಿತಾ ಹೆಗಡೆ ಪ್ರಾಂಶುಪಾಲರಾದ ಡಾ. ತನುಜಾ ಎಸ್ ಕುಮಾರ್ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.





