ಚಿಕ್ಕೋಡಿ :–
ಕಳೆದ ೧೮ ದಿನಗಳ ಹಿಂದೆ ಆತ್ಯಹತ್ತೆಗೆ ಸರಕಾರಕ್ಕೆ ಪತ್ರ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ
ತಾಲೂಕಿನ ಬೆಳಕೂಡ ಗ್ರಾಮದ ಮೂಲ ನಿವಾಸಿಯಾದ ನೇಮಿನಾಥ ನಿಪ್ಪಾಣಿ ಯಲ್ಲಿ ಅಥಿತಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು,
ನೇಮಿನಾಥ ಬಸವಣ್ಣಿ ತಪಕೇರಿ ಇವರು
30 ಸೆಪ್ಟೆಂಬರ್ ರಂದು ರಾಜ್ಯ ಸರಕಾರಕ್ಕೆ ಲಿಖಿತ ಪ್ರತ್ರ ಬರೆದು, ಅಥಿತಿ ಶಿಕ್ಷಕರಿಗೆ ಸೇವೆಯಲ್ಲಿ ಸರಕಾರಿ ಸಮಾನ ಸೌಲ್ಭ್ಯ ಕಲ್ಪಿಸಿ ನ್ತಾಯ ವದಗಿಸುವಂತೆ ಹಾಗು ಸಕರಾರಿ ತಾರತಮ್ಯದ ಬಗ್ಗೆ ಬೆಸತ್ತು ಆತ್ಮಹತ್ಯೆ ಮಾಡಿಕೋಳ್ಳುವದಾಗಿ ಪತ್ರದಲ್ಲಿ ಉಲ್ಲೇಖಿಸಿದರು.
ಈ ವಿಷಯ ವಾಗಿ ಚಿಕ್ಕೋಡಿ ಪೋಲಿಸಠಾಣೆಯಲ್ಲಿ ಪ್ರಕರಣ ಧಾಖಲಾಗಿ ನಂತರ ಪೋಲಿಸರು ವಿಶೇಷ ತಂಡವಾಗಿ ಕಾರ್ಯಾಚರಣೆ ನಡೆಸಿ ಕಾರ್ಯಪ್ರವೃತ್ತರಾಗಿದ್ದರು.
ಅದರಂತೆ ವಿಜಯಪುರ ಜಿಲ್ಲೆಯ ತಾಳುಕೊಟಿ ಗ್ರಮದ ಸಂಬಂಧಿಕರ ಮನೆಯಲ್ಲಿ ಇರುವ ಸುದ್ದಿ ತಿಳಿದ ಪೋಲಿಸರು ಸುರಕ್ಷಿತವಾಗಿ ನೇಮಿನಾಥ ಬಸವಣ್ಣಿ ತಪಕೇರಿಯವರಿಗೆ ಚಿಕ್ಕೋಡಿಗೆ ಕರೆತಂದು ಸದರಿ ಪ್ರಕರಣಕ್ಕೆ ನಾಂದಿಹಾಡಿದ್ದಾರೆ.





