ಬೆಂಗಳೂರು :–
ಕರ್ನಾಟಕದ ನದಿಗಳ ಸ್ಥಿತಿಗತಿ ಕುರಿತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ ವರದಿಯ ಪ್ರಕಾರ “೧೨ ಪ್ರಮುಖ ನದಿಗಳ” ನೀರು ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ.

ಸೆಪ್ಟೆಂಬರ್‌ನಲ್ಲಿ ನಡೆಸಿದ ಪರೀಕ್ಷೆಯಲ್ಲಿ, “ಕಾವೇರಿ, ಕೃಷ್ಣ, ಭೀಮಾ, ತುಂಗಭದ್ರ” ನದಿಗಳು ಸಿ ದರ್ಜೆಯ ಗುಣಮಟ್ಟವನ್ನು ಹೊಂದಿವೆ.
ಎ ದರ್ಜೆಯು ನೇರವಾಗಿ ಕುಡಿಯಲು ಯೋಗ್ಯ, ಬಿ ದರ್ಜೆಯು ಸಂಸ್ಕರಿಸಿದ ನಂತರ ಮಾತ್ರ ಗೃಹಬಳಕೆಗೆ ಯೋಗ್ಯ,
ಸಿ ದರ್ಜೆಯು ಮೀನುಗಾರಿಕೆ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಸೂಕ್ತ ಎಂದು ಸೂಚಿಸುತ್ತದೆ.





