ಚಿಕ್ಕೋಡಿ :–
ರೈತ ಬೆಳದ ಕಬ್ಬು ಬೆಳೆಗೆ ಬೆಲೆ ನಿಗಧಿಸಿ, ನಂತರ ಕಾರ್ಖಾನೆ ಆರಂಬುಸುವಂತೆ ಆಗ್ರಹಿಸಿ ಮಾನವ ಸರಪಳ ನಿರ್ಮಿಸಿ ಪಟ್ಟಣದ ಬಸವ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ
ತಡೆದು ಪ್ರತಿಭಟನೆ ನಡೆಸಿ ಗ್ರೇಡ್ ೨ ತಹಶಿಲ್ದಾರ ಕಿರಣ ಬೆಳವಿ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘಟನೆ ಹಾಗು ಹಸಿರು ಸೇನೆ ವತಿಯಿಂದ ಗುರುವಾರ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷರಾದ ಮುಖಂಡ ಚುನ್ನಪ್ಪಾ ಪೂಜಾರಿ, ಸರಕಾರದ ನಿರ್ಲಕ್ಷ ಧೋರಣೆಯನ್ನು ಸಹಿಸಲ್ಲ. ದಶಕಗಳಿಂದ ರೈತರ ಕಬ್ಬಿನ ಬೆಳೆ ಹಳೆಯ ದರವನ್ನೆ ಮೀಸಲಾಗಿಸಿರುವ ರ್ಖಾನೆಗಳು ಮತ್ತು ಮಾಲಿಕರು ನೀತಿ ಖಂಡನೀಯ. ರೈತ ತನ್ನ ಪರಿವಾರದೊಂದಿಗೆ ಬೆವರಿನರೀತಿ ರಕ್ತ ಸುರಿಸಿ ಕಷ್ಠ ಪಡುತ್ತಿದ್ದಾರೆ. ಕಬ್ಬು ಬೆಳೆ ಮೆಲೆ ರೈತರ ಹಕ್ಕಿದೆ. ಕಾರ್ಖಾನೆಗಳು ಮೊದಲು ಕಬ್ಬುನುರಿಸುವದಕ್ಕೆ ಚಾಲನೆ ನೀಡಿ ನಂತರ ಬೆಲೆ ನಿಗಧಿ ಮಾಡುವ ನೀತಿಯನ್ನು ಸಹಿಸಲ್ಲ. ೩೫೦೦ ದರ ನಿಗಧಿ ಹಾಗೂ ಮುಂಗಡ ಹಣವನ್ನು ಪಾವತಿಸಿ ಕಾರ್ಖಾನೆಗಳು ಪ್ರಾರಂಭಿಸಿ ಎಂದು ಆಗ್ರಹಿಸಿದರು.
ಬಸವ ವೃತ್ತದ ಬಳಿ ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಾನವ ಸರಪಳಿ ನಿರ್ಮಿಸಿ ನಡೆದ ಪ್ರತಿಭಟನೆಯಿಂದ ರಾಷ್ಟ್ರೀಯ ಹೆದ್ದಾರಿ ಗೋಟು- ಜೇವರ್ಗಿ ರಸ್ತೆಯ ಮೇಲೆ ಹಾಗೂ ನಿಪ್ಪಾಣಿ- ಮುಧೋಳ ರಾಜ್ಯ ಹೆದ್ದಾರಿ ಮೇಲೆ ಕಿಲೋಮೀಟರ್ ಸಾರಥಿ ಸಾಲಿನಲ್ಲಿ ನಿಂತು ಕಾದವು. ಕೆಲ ಗಂಟೆಗಳ ಕಾಲ ಪ್ರತಿಭಟನೆಯಿಂದ ರಸ್ತೆ ಸಂಚಾರಕ್ಕೆ ಆಡಚಣೆ ಉಂಟಾಯಿತು ಪೊಲೀಸರು ಟ್ರಾಫಿಕ್ ಸಂಚಾರ ಸುಗಮಗೊಳಿಸಲು ಹರಸಾಹಸ ಪಟ್ಟರು.
ಚಿಕ್ಕೋಡಿಯ ಸುತ್ತಲಿನ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು ಆಗಮಿಸಿದ್ದರು. ಈ ಸಂಧರ್ಭದಲ್ಲಿ ರೈತಮುಖಂಡರು ದರ ನಿಗಧಿಮಾಡಿ ಲಿಖಿತ ಪತ್ರ ಪಡೆದು ನಂತರ ಕಾರ್ಖಾನೆ ಆರಂಬಿಸಲು ಅವಕಾಶ ನೀಡುವಂತೆ ರೈತರು ಅಧಿಕಾರಿಗಳಿಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕ ಅಧ್ಯಕ್ಷರಾದ ಮನೋಜಕುಮಾರ್ ಮನಗೂಳಿ, ಮಲ್ಲಪ್ಪ ಅಂಗಡಿ, ನಿಂಗಪ್ಪ ಪಕ್ಕಂಡಿ, ಆನಂದ ಪಾಶ್ಚಾಪುರೆ, ಬಸವರಾಜ ಪಾಶ್ಚಾಪುರೆ, ಸಂಜು ಅವನ್ನವರ, ರಮೇಶ ಕಲ್ಲಾರ , ಸದಾಶಿವ ಚಿಮ್ಮಟ ಸೇರಿ ವಿವಿಧ ರೈತ ಮುಖಂಡರು, ರೈತರು ಪಾಲ್ಗೊಂಡರು.





