ಚಿಕ್ಕೋಡಿ :–
ಪಟ್ಟಣದ ಆರ್ ಡಿ ಕಾಲೇಜು, ಮೈದಾನದಲ್ಲಿ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಚಿಕ್ಕೋಡಿ ವತಿಯಿಂದ ಆಯೋಜಿಸಲಾದ ಹೆಲ್ತ್ ಪ್ರಿಮೀಯರ ಲೀಗ-೨೦೨೫ ೫ ನೇಯ ಸೀಜನ್ ನ ಕ್ರಿಕೇಟ ಪಂದ್ಯಾವಳಿಗೆ ಎ.ಡಿ.ಎಚ್.ಓ ಡಾ. ಎಸ್ ಎಸ್ ಗಡೇದ ಶನಿವಾರ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಅವರು, ಕಳೆದ ೫ ವಷ೯ಗಳಿಂದ ಚಿಕ್ಕೋಡಿ ಜಿಲ್ಲೆಯ ಆರೋಗ್ಯ ಇಲಾಖೆಯ ಸಿಬಂದಿಗಳ ಮಾನಸಿಕ ಒತ್ತಡ ಬದುಕನ್ನು ಸರಿಪಡಿ ಕ್ರೀಡಾ ಮನೋಬಾವ ಬೆಳೆಸಿಕೊಳ್ಳುವ ಉದ್ದೇಶದಿಂದ ಕ್ರಿಕೆಟ್ ಪಂದ್‌ವಳಿಯನ್ನು ಆಯೋಜಿಸಲಾಗಿದೆ. ಚಿಕ್ಕೋಡಿ ಆರೋಗ್ಯ ಜಿಲ್ಲೆ ವ್ಯಾಪ್ತೀಯ ೧೨ ತಂಡಗಳು ಆಗಮಿಸಿದ್ದು ಎರಡು ದಿನಗಳ ಕಲ ಈ ಪಂದ್ಯಾವಳಿಗಳು ನಡೆಯಲಿದೆ ಎಂದು ಹೇಳಿದರು ಹಾಗೂ ಆಟಗಾಗರಿಗೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಡಾ. ವಿವೇಕ ಹೂನ್ನೊಳಿ ಡಾ. ಶಾಂತಾರಾಮ ಬಾಗೇವಾಡಿ, ಡಾ. ಅರುಣ ಝಾಪಗೋಳ,ಡಾ. ವಿನೋದ ಘಸ್ತಿ ,ಡಾ. ಸಚೀನ ಬಕರೆ,ನವೀನ ಗಂಗರೇಡ್ಡಿ, ಬಾಬಾಸಾಹೇಬ ಕುಂಬಾರ,ಜಿ ಜಿ ಕುಲಕರ್ಣಿ, ದಯಾನಂದ ತೆಗೋರ, ದೀಪಕ ಚಿನ್ನಾರಿ, ದೀಪಕ ಅಗ್ನಿಹೋತ್ರಿ,ಕುಮಾರಸ್ವಾಮಿ ಟಿ, ಗೀರಿಶ ಕುಲಕಣಿ೯, ಉತ್ತಮಸಿಂಗ ರಜಪೂತ, ರಾಜು ದತ್ತವಾಡೆ, ರಾಜಶೇಖರ ಹಳೆಮನಿ ಸೇರಿ ವೈದ್ಯರು ಇಲಾಖೆ ಸಿಬ್ಬಂದಿಗಳು ಇದ್ದರು.





