ಚಿಕ್ಕೋಡಿ :–
ತಾಲೂಕಿನ ಮುರುಗುಂಡಿ ಗ್ರಾಮದಲ್ಲಿ ದೀಪಾವಳಿಯ ಪ್ರಯುಕ್ತ ಮರಸಿದ್ದೇಶ್ವರ ದೇವರ ಪಲ್ಲಕ್ಕಿ ಉತ್ಸವ ಹಾಗೂ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು

ಹುಲುಗಬಾಳಿಯಿಂದ ಹೊಳೆ ಸ್ನಾನ ಮುಗಿಸಿಕೊಂಡು ಪಲ್ಲಕ್ಕಿಯೊಂದಿಗೆ ಪಾದಯಾತ್ರೆಯಲ್ಲಿ ಸಾಗಿ ಗ್ರಾಮದ ಗಡಿಯಲ್ಲಿ ಪಲ್ಲಕ್ಕಿ ಹಿಡಿದು ನಿಲ್ಲುತ್ತಾರೆ. ರಾತ್ರಿ ದಿವಟಗಿಗಳ ಬೆಳಕಿನಲ್ಲಿ ದೇವರ ಪಲ್ಲಕ್ಕಿ ಹಾಗೂ ದೇವರ ಕುದುರೆಗೆ ಕಡುಬು ನೈವೇದ್ಯ ತೋರಿಸಿ ಪಲ್ಲಕ್ಕಿಯನ್ನು ಊರೊಳಗೆ ಭಕ್ತರು ಭಕ್ತಿಯಿಂದ ಬರಮಾಡಿಕೊಳ್ಳುತ್ತಾರೆ. ನಂತರ ಮುರಸಿದ್ದೇಶ್ವರ ದೇವರ ದೇವಸ್ಥಾನದಲ್ಲಿ ದಿವಟಗಿ ಗಳನ್ನೆಟ್ಟುಕೊಂಡು ಭಕ್ತಿ ಪ್ರಾರ್ಥನೆಯಲ್ಲಿ ದೇವರ ಮೊರೆ ಹೋಗುತ್ತಾರೆ.
ಪ್ರತಿ ವರ್ಷವೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆಯುವ ಈ ಜಾತ್ರಾ ಮಹೋತ್ಸವಕ್ಕೆ ಸುತ್ತಲಿನ ಗ್ರಾಮಗಳಿಂದ ಭಕ್ತ ಗಣ ಹರಿದು ಬರುತ್ತದೆ. ಜಾತ್ರೆ ಸಂದರ್ಭದಲ್ಲಿ ದತ್ತಿ ಕುಣಿತ ಡೊಳ್ಳು ಕುಣಿತ ವಿವಿಧ ಸಾಂಸ್ಕೃತಿಕ ಪ್ರದರ್ಶನದೊಂದಿಗೆ ವಾದ್ಯ ಪಲ್ಲಕ್ಕಿ ಮೆರವಣಿಗೆ ಸಾಗುತ್ತದೆ. “ರಾತ್ರಿ ಇಡೀ ನಡೆಯುವ ಈ ಜಾತ್ರಾ ಮಹೋತ್ಸವ ದಿವಟಿಗಿ ಬೆಳಕಿನ ಮಧ್ಯೆ” ಜರುಗುವುದು ವಿಶೇಷವಾಗಿದೆ.





