ಚಿಕ್ಕೋಡಿ :–
ಅತ್ಯಾಧುನಿಕ ಯುಗದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇವೆ ಪಡೆಯಲು ದೇಶ ವಿದೇಶಕ್ಕೆ ತೆರಳುವ ಬದಲು ಗ್ರಾಮೀಣ ಭಾಗದಲ್ಲಿ ಸಂಜೀವ ಪಾಟೀಲರ ಕಾರ್ಯ ಶ್ಲಾಘನೀಯ ಶ್ರೀ ಪರಮ ಪೂಜ್ಯ ಸ್ವಸ್ತಿ ಶ್ರೀ ಲಕ್ಷಿ ಸೇನ್ ಭಟ್ಟಾರಕ ಪಟ್ಟಾಚ್ಯಾರ್ಯ ಮಾಹಾಸ್ವಾಮಿಗಳು ಎಂದರು.
ತಾಲೂಕಿನ ಕುಪ್ಪಾನವಾಡಿ ಶ್ರೀ. ೧೦೮ ಆಚಾರ್ಯ ರತ್ನ ದೇಶಭೂಷಣ ಆರೋಗ್ಯ ಧಾಮ ದಲ್ಲಿ ಡಿ. ಹೆಚ್. ಆರೋಗ್ಯ ಸೊಸೈಟಿಯ, ದಿಯಾ ಫಿಜಿಯೋಥೆರಪಿ ಕಾಲೇಜು ಮತ್ತು ದಿಯಾ ಕಾಲೇಜ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜುಗಳ ಉಧ್ಘಾಟನಾ ಸಮಾರಂಭ

ಶುಕ್ರವಾರ ಮಾತನಾಡಿದ ಅವರು
ಯುವಕ ಯುವತಿಯರು ಅವಕಾಶ ಕಲ್ಪಿಸಿ ಕೊಟ್ಟ ಅವಕಾಶಗಳ ಸದುಪಯೋಗ ಪಡೆದುಕೊಳ್ಳಿ. ಲಕ್ಷಾಂತರ ರೂಪಾಯಿವಹಿಸಿ ವಿದ್ಯಾರ್ಥಿಗಳು ಶಿಕ್ಷಣ ಅರಿಸಿ ಪರರಾಜ್ಯ ದೇಶಾಂತರ ಕ್ಕೆ ಅಲೆಯುವ ಬದಲು ಸ್ಥಳೀಯವಾಗಿ ಕಡಿಮೆ ಖರ್ಚಿನಲ್ಲಿ ಶಿಕ್ಷಣ ಪಡೆದು ಯಶಸ್ವಿ ಯಾಗಿ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಚಿಂಚಣ ಅಲ್ಲಮಪ್ರಭು ಸಿಧ್ಧ ಸಂಸ್ಥಾನ ಮಠದ ,ಶ್ರೀ ಶಿವಪ್ರಸಾದ ಸ್ವಾಮಿಗಳು ಮಾತನಾಡಿ ಆಸ್ಪತ್ರೆಯು ಕಳೆದ ಹತ್ತು ವರ್ಷಗಳ ಸಾಧನೆ ತಿಳಿಸಿದರು. ವೈದ್ಯ ದಂಪತಿಗಳಾದ ಡಾ. ಸಂಜೀವ ಅ ಪಾಟೀಲ ಮತ್ತು ಡಾ. ಸಂಧ್ಯಾ ಸ ಪಾಟೀಲ ರವರ ಕುರಿತು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.
ಶ್ರೀ.೧೦೮ ಆಚಾರ್ಯರತ್ನದೇಶಭೂಷಣ ದಿಗಂಬರ ಜೈನ ಶಾಂತಿ ಗಿರಿ ಟ್ರಸ್ಟ್, ಕೋಥಳಿ-ಕುಪ್ಪಾನವಾಡಿ ಅಧ್ಯಕ್ಷರಾದ ಪದ್ಮಾಕರ ಆರ್. ಪಾಟೀಲ ಮಾತನಾಡಿದರು.
ಡಿ.ಹೆಚ್. ಆರೋಗ್ಯ ಸೊಸೈಟಿ ಕಾರ್ಯದರ್ಶಿ ಡಾ. ಸಂಧ್ಯಾ ಪಾಟೀಲ ಮಾತನಾಡಿ ೨೦೧೪ ರಲ್ಲಿ ೨೦ ಬೆಡ್ ಆಸ್ಪತ್ರೆ ಆಗಿದ್ದ ದಿಯಾ ಆಸ್ಪತ್ರೆ ಇಂದು ೧೦೦ ಬೆಡ್ ಅತ್ಯಧುನಿಕ ತಂತ್ರಜ್ಞಾನವುಳ್ಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ದಾಪುಗಾಲು ಇಡುತ್ತಿದೆ . ಆಸ್ಪತ್ರೆಯೊಂದಿಗೆ ಸ್ಥಳೀಯ ಯುವಕ ಯುವತಿಯರಿಗೆ ಕಡಿಮೆ ಖರ್ಚಿನಲ್ಲಿ ವೈದ್ಯಕೀಯ ಶಿಕ್ಷಣ ನೀಡುವ ಗುರಿ ನಮ್ಮದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಪೂಜಾ ಕುಂಬಾರ ಭರತ ನಾಟ್ಯ ಮಾಡಿದರು, ಪ್ರಿಯಾಂಕ ಕಮತೆ ಹಾಗೂ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ಮಾಡಿದರು. ಪ್ರಗತಿ ಬನಸೋಡೆ ನಿರೂಪಿಸಿದರು, ರಾಜು ಯಲ್ಲಾಯಿಗೋಳ ಸ್ವಾಗತಿಸಿದರು ಮತ್ತು ಚಂದ್ರಕಾಂತ ವಂದಿಸಿದರು.
ಡಿ.ಹೆಚ್.ಆರೋಗ್ಯ ಸೊಸೈಟಿ ಅಧ್ಯಕ್ಷರಾದ ಡಾ. ಸಂಜೀವ ಪಾಟೀಲ , ನ್ಯಾಯವಾದಿ ಎಸ್ ಟಿ ಮುನ್ನೋಳಿ , ಪಾಸಗೌಡ ಪಾಟೀಲ, ಜಿತೇಂದ್ರ ಪಾಟೀಲ, ಲಕ್ಷ್ಮಣ ಡಂಗೇರ, ಬಿ ಎ ಬೋಧಕರ, ಪ್ರಕಾಶ ಹುಜ್ಜಕ್ಕಿ ಸೇರಿ ಗಣ್ಯರು, ಡಿ.ಹೆಚ್. ಆರೋಗ್ಯ ಸೊಸೈಟಿಯ ಸರ್ವ ನಿರ್ದೇಶಕರು ಉಪಸ್ಥಿತರಿದ್ದರು.





