ಬೆಂಗಳೂರು :–
ಆಳಂದ ಮತ ಕ್ಷೇತ್ರದಲ್ಲಿ ಮತದಾರರ ಹೆಸರು ಅಳಿಸುವ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಹೊಣೆಗಾರರನ್ನಾಗಿ ಮಾಡಿ ಜೈಲಿಗೆ ಹಾಕಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಮತದಾರರ ಹೆಸರು ಅಳಿಸಲು ಹಣ ನೀಡಿರುವ ವಿಚಾರದಲ್ಲಿ ನಾವು ಇಷ್ಟು ದಿನ ಹೇಳುತ್ತಿದ್ದ ವಿಷಯ ಎಸ್‌ಐಟಿ ತನಿಖೆಯಿಂದ ದೃಢಪಟ್ಟಿದೆ.
ಎಲ್ಲ ತನಿಖೆ ಗಳು ಬಿಜೆಪಿ ನಾಯಕರು, ಮತ್ತವರ ಸಹಚರರ ಅಕ್ರಮವನ್ನು ಎತ್ತಿ ತೋರಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.





