ಚಿಕ್ಕೋಡಿ :–
ಡಾ. ಪುನೀತ ರಾಜಕುಮಾರ ಅಭಿಮಾನಿಗಳ ಬಳಗದಿಂದ ಪಟ್ಟಣದ ಸಂಸಧರ ಕಚೇರಿ ಆವರಣದಲ್ಲಿರುವ, ಡಾ ಪುನೀತ ರಾಜಕುಮಾರ ಇವರ ಪುತ್ತಳಿಗೆ, ಚಿಕ್ಕೋಡಿ ತಾಲೂಕಾ ದಂಡಾಧಿಕಾರಿಗಳಾದ ರಾಜೇಶ ಬುರ್ಲಿ ಅವರು ಪುತ್ತಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು,

ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಡಾ. ಪುನೀತ ಇವರು ಕೇವಲ ಕಲಾಕಾರ ಅಲ್ಲದೇ, ಒಬ್ಬ ಒಳ್ಳೆಯ ಸಮಾಜಿಕ ಕಾರ್ಯಕರ್ತರಾಗಿ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ, ಅವರನ್ನು ಕಳೆದುಕೊಂಡ ನಮ್ಮ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಅಮೂಲ ನಾವಿ, ಅಭಿಮಾನಿಗಳಾದ ಸಂಜು ಬಡಿಗೇರ, ಅನೀಲ ನಾವಿ, ಪ್ರತಾಪಗೌಡ ಪಾಟೀಲ, ರಮೇಶ ಡಂಗೇರ, ನಕೂಲ ಡಂಗೇರ, ಸಾಗರ ಪಾಟೀಲ, ಕೃಷ್ಣಾ ಕೆಂಚಣ್ಣವರ, ವಿನಾಯಕ ಪಾಟೀಲ, ರಮೇಶ ದೊಡ್ಡಮನಿ, ಕಲ್ಲಪ್ಪಾ ಡಂಗೇರ, ಸಂಜು ಅಕ್ಕೋಳೆ, ಸಚೀನ ದೊಡ್ಡಮನಿ, ಸಂತೋಷ ಪೂಜೇರಿ ಮುಂತಾದವರು ಉಪಸ್ಥಿತಿತರಿದ್ದರು.





