ಬೆಳಗಾವಿ :–
ಬೆಳಗಾವಿಯಲ್ಲಿ ಆಚರಿಸಲಾಗುವ ಕರ್ನಾಟಕ ರಾಜ್ಯೋತ್ಸವಕ್ಕೆ ಇದೇ ಮೊದಲ ಬಾರಿಗೆ ಸರ್ಕಾರದಿಂದ ₹ ೫೦ ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ.

“ಅಖಂಡ ಕರ್ನಾಟಕ ರಚನೆಯಾಗಿ ೭೦ ವರ್ಷಗಳ ಅವಧಿಯಲ್ಲಿ ಯಾವುದೇ ಸರ್ಕಾರ ರಾಜ್ಯೋತ್ಸವಕ್ಕೆ” ಅನುದಾನ ನೀಡಿರಲಿಲ್ಲ.
ಸಂಪ್ರದಾಯದಂತೆ ₹ ೧ ಲಕ್ಷ ಮಾತ್ರ ಜಿಲ್ಲಾಡಳಿತ ನೀಡುತ್ತಿತ್ತು. ಬೆಳಗಾವಿಯಲ್ಲಿ ಆಚರಿಸುವ ರಾಜ್ಯೋತ್ಸವ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದ್ದಾರೆ.





