ಬಳ್ಳಾರಿಯನ್ನು ಕರ್ನಾಟಕದಲ್ಲಿ ಉಳಿಸಲು ನಡೆದ ೧೯೫೨ ರ ಚಳವಳಿಯಲ್ಲಿ ಕೋ.ಚನ್ನಬಸಪ್ಪ ಜತೆ ಮುಂಚೂಣಿಯಲ್ಲಿದ್ದವರು ರಂಜಾನ್ ಸಾಬ್.
ಬಳ್ಳಾರಿ ಕರ್ನಾಟಕದಲ್ಲೇ ಉಳಿದ ಹಿನ್ನೆಲೆ ೧೯೫೩ ರ ಅ.೧ ರಂದು ಸಂಭ್ರಮಾಚರಣೆ ನಡೆದಾಗ ರಂಜಾನ್ ಪೆಂಡಾಲ್ ಕಾದಿದ್ದರು.
ಪೆಂಡಾಲ್‌ನಲ್ಲಿ ರಂಜಾನ್ ಮೇಲೆ ಆ್ಯಸಿಡ್ ಬಲ್ ದಾಳಿ ನಡೆದ ನಂತರ ಅವರು ಆಸ್ಪತ್ರೆಯಲ್ಲಿ ನಿಧನರಾದರು.
ಅದೇ ದಿನ ಸಿಎಂ ಕೆಂಗಲ್ ಹನುಮಂತಯ್ಯ, ಕನ್ನಡ ನಾಡಿನ ಏಕೀಕರಣ ಹೋರಾಟದಲ್ಲಿ ಹುತಾತ್ಮರಾದ ಏಕೈಕ ವ್ಯಕ್ತಿ ರಂಜಾನ್ ಸಾಬ್ ಎಂದು ಘೋಷಿಸಿದರು.





