“ಭಕ್ತರು ನೀಡಿದ ಮಠಗಳ ಆಸ್ತಿ ದುರುಪಯೋಗ ವಾಗದಂತೆ ಕಾಪಾಡುವುದರೊಂದಿಗೆ ತಮ್ಮ ಭಕ್ತಿಯನ್ನು ಭಕ್ತರು ಮರೆಯಬೇಕು” : ಶಿವಲಿಂಗೇಶ್ವರ ಜಗದ್ಗುರುಗಳು


ಚಿಕ್ಕೋಡಿ :–

ನಿರ್ಲಕ್ಷ ತೋರಿದರೆ ಭಕ್ತರು ನೀಡಿದ ಮಠಗಳ ಆಸ್ತಿ ದುರುಪಯೋಗ ವಾಗದಂತೆ ಕಾಪಾಡುವುದರೊಂದಿಗೆ ತಮ್ಮ ಭಕ್ತಿಯನ್ನು ಭಕ್ತರು ಮರೆಯಬೇಕು .ಸಮಾಜದಲ್ಲಿ ಧಾರ್ಮಿಕತೆ ಉಳಿವುದೇ ಮಠಮಾನ್ಯಗಳ ಮೂಲ ಉದ್ದೇಶ. ಆ ನಿಟ್ಟಿನಲ್ಲಿ ಮಠಮಾನ್ಯಗಳು ಒಂದು ಕೈಯಲ್ಲಿ ಲಿಂಗ ಮತ್ತೊಂದು ಕೈಯಲ್ಲಿ ಶಿಕ್ಷಣ ಬೋಧಿಸುವ ಕಾರ್ಯದಲ್ಲಿ ತೊಡಗಿವೆ ಎಂದು ನಿಡಸೋಶಿಯ ಪಂಚಮ ಶಿವಲಿಂಗೇಶ್ವರ ಜಗದ್ಗುರುಗಳು ತಿಳಿಸಿದರು.

ಪಟ್ಟಣದ ಬಸವ ವೃತ್ತದ ಸಮೀಪ ಇರುವ ಲಿಂಗೈಕ್ಯ ಶ್ರೀ ನೀಲಕಂಠ ಮಹಾಸ್ವಾಮಿಗಳ ಗದ್ದುಗೆಗೆ ಐಕ್ಯ ಮಂಟಪ ಉದ್ಘಾಟನೆ ಹಾಗೂ ಶಿವಲಿಂಗ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು 50 ವರ್ಷದ ನಂತರ ಗದ್ದಗೆ ಕಟ್ಟಡ ನಿರ್ಮಾಣವಾಗುತ್ತಿರುವದಕ್ಕೆ ಕಳವಳವ್ಯಕ್ತಪಡಿಸಿದರು.

ಎಲ್ಲಾ ಧರ್ಮೀಯರಿಗೂ ಶಿಕ್ಷಣದ ಬೋಧನಾ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಲಿವೆ.ಮಹಾರಾಷ್ಟ್ರದ ಹಲವುಕಡೆಗಳಲ್ಲಿ ಮಠದ ಆಸ್ತಿಗಳು ಇವೆ. ಅದರ ಬಗ್ಗೆಯು ಗಮನ ಹರಿಸಿ ಆಸ್ತಿ ರಕ್ಷಣೆಗೆ ಮುಂದಾಗಬೇಕು . ಭಾರತ ದೇಶದಲ್ಲಿ ಸಂಸ್ಕೃತಿ ಹಾಗೂ ಸಮಾಜದ ಕಳಕಳಿ ಇದ್ದ ಜನಸಂಖ್ಯೆ ಕಡಿಮೆಯಾಗುತ್ತಿದ್ದು ಹಣವಂತರು ಹೆಚ್ಚುತ್ತಿದ್ದಾರೆ .

ಇದುವರೆಗೂ ರಾಜ್ಯದಲ್ಲಿ 300 ಮಠಗಳು ಕಳೆದುಹೊಗಿದ್ದು ಮನೆ, ಗೋಧಮುಗಳಾಗಿ ಮಾರ್ಪಟ್ಟಿವೆ. ಭಕ್ತರು ಆಸ್ತಿ ರಕ್ಷಣೆಗೆ ಮುಂದಾಗಿ ಮಠಗಳು ಪುಣಶ್ಚೆತನ ಮಾಡಲು ಕರೆ ನೀಡಿದರು.

ಚಿಕ್ಕೋಡಿ ಚರಮೂರ್ತಿ ಮಠದ ಶ್ರೀ ಸಂಪಾದನಾ ಮಹಾಸ್ವಾಮಿಗಳು ಮಾತನಾಡಿ ಲಿಂಗೈಕ್ಯ ಶ್ರೀ ನೀಲಕಂಠ ಮಹಾಸ್ವಾಮಿಗಳ ಗದ್ದುಗೆ ಅಲಂಕರಿಸಿದ ನಂತರ ಮಹಿಳೆಯರಿಗೆ ಆದ್ಯತೆ ನೀಡುವುದರೊಂದಿಗೆ ಸಮಾಜದ ಮುನ್ನೆಲೆಗೆ ಮಹಿಳೆಯರನ್ನು ತರುವ ಕಾರ್ಯದಲ್ಲಿ ಶ್ರೀಗಳು ತೊಡಗಿದ್ದರು ಆ ನಿಟ್ಟಿನಲ್ಲಿ ಇಂದಿನ ಶ್ರೀಮಠವು ಕಾರ್ಯಪ್ರವೃತ್ತ ವಾಗಿರುತ್ತದೆ ಎಂದರು.

ಲಿಂಗೈಕ್ಯ ಶ್ರೀ ನೀಲಕಂಠ ಮಹಾಸ್ವಾಮಿಗಳ ಗದ್ದುಗೆ ಮಹಾ ರುದ್ರಾಭಿಷೇಕ ಭಕ್ತಿ ಭಾವದಿಂದ ಜರುಗಿತು ನಂತರ ಮೂರ್ತಿ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮ ಜರುಗಿರು. ಕಾರ್ಯಕ್ರಮದ ಕೊನೆಗೆ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ಚಿಂಚಣಿ ಸಿದ್ದ ಸಂಸ್ಥಾನ ಮಠದ ಶ್ರೀ ಶಿವಪ್ರಸಾದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಚಂದ್ರಶೇಖರ ಅರಭಾವಿ ನಿರೂಪಿಸಿದರು, ಸ್ವಾಗತಿಸಿದರು, ವಂದಿಸಿದರು. ಕಾರ್ಯಕ್ರಮದಲ್ಲಿ ಮಠಕ್ಕೆ ದಾನ ನೀಡಿದ ಭಕ್ತರನ್ನು ಸತ್ಕರಿಸಿ ಮಹಾಸ್ವಾಮಿಗಳು ಆಶೀರ್ವಾದ ನೀಡಿದರು.

ಈ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಸಂಜಯ ಕವಟಗೀಮಠ, ಅಜಯ ಕವಟಗೀಮಠ, ಪ್ರಭು ಬೆಲ್ಲದ ,ಚೇತನ ಚಿಮ್ಮಡ, ನಾಗರಾಜ ಮೇಧಾರ, ಗೋಪಿ ಉಂಬರವಾಡಿ, ಸುರೇಶ ಕಾಳಿಂಗೆ, ಸುಭಾಷ ಕವಲಾಪುರೆ , ಪ್ರಭು ಸೇರಿ ಗಣ್ಯರು ಉಪಸ್ಥಿತರಿದ್ದರು.

Share this post:

Leave a Reply

Your email address will not be published. Required fields are marked *

You cannot copy content of this page