ಚಿಕ್ಕೋಡಿ :–
ತಾಲುಕಿನ ಯಕ್ಸಂಬಾ ಪಟ್ಟಣದ ಶಿವಶಂಕರ ಜೊಲ್ಲೆ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆ (ಸಿ.ಬಿ.ಎಸ್.ಇ)ನಣದಿ ಕ್ಯಾಂಪಸ್‌ನಲ್ಲಿ ೭೦ ನೇ ಕರ್ನಾಟಕ ರಾಜ್ಯೋತ್ಸವನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಯಿತು. ಆಶಾಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಅಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆಯವರು ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು.
ಜೊಲ್ಲೆ ಶಿಕ್ಷಣ ಸಂಸ್ಥೆಯ ಸಮನ್ವಯ ಅಧಿಕಾರಿಗಳಾದ ಡಾ. ಎಂ.ಎಂ ಪಾಟೀಲ ಅವರು ಕನ್ನಡಿಗರ ಧೈರ್ಯಗಳ ಧೈರ್ಯಗಳ ಧರ್ಮಗಳ ಸ್ಥೈರ್ಯಗಳ ಕುರಿತು ಮಾತನಾಡುತ್ತ ಜನನಿ ಹಾಗೂ ಜನ್ಮ ಭೂಮಿ ಸ್ವರ್ಗಕ್ಕಿಂತ ಮಿಗಿಲಾದವು. ಕನ್ನಡ ನಾಡಿಗೆ ತನ್ನದೇಯಾದ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ. ಕನ್ನಡ ನಾಡಿನ ಗತವೈಭವ ವನ್ನುಕೊಂಡಾಡಿದರು. ಉಪನ್ಯಾಸಕರಾದ ಶ್ರೀ ರಾಮಚಂದ್ರ ಸನದಿ ಅವರು ನಾಡು ನುಡಿಯ ಕುರಿತು ಮಾತನಾಡುತ್ತ, ಎಲ್ಲ ಭಾಷೆಗಳನ್ನು ಗೌರವಿಸಬೇಕು ಹಾಗೂ ಕನ್ನಡ ಭಾಷೆಯನ್ನು ಪೂಜಿಸಬೇಕು.

ಕರ್ನಾಟಕವು ಸಂಸ್ಕೃತಿಯ, ಸಂಪ್ರದಾಯ, ಕಲೆ, ವಾಸ್ತುಶಿಲ್ಪ, ಸಸ್ಯ ಹಾಗೂ ಪ್ರಾಣಿ ಸಂಪತ್ತಿನಿಂದ ಸಮೃದ್ಧವಾಗಿದೆ. ಕನ್ನಡಿಗರಿಗೆ ಕನ್ನಡ ಭಾಷೆಯೇ ಉಸಿರಾಗಬೇಕು. ಭಾಷೆ, ನೆಲ, ಜಲ, ಪರಂಪರೆ, ಸದಾಚಾರ, ಸಂಸೃತಿ ಹಾಗೂ ಸಂಪ್ರದಾಯಗಳ ಬಗ್ಗೆ ಕನ್ನಡಿಗರಾದ ನಾವೆಲ್ಲರೂ ವಿಶೇಷವಾದ ಅಭಿಮಾನವನ್ನು ಇಟ್ಟುಕೊಳ್ಳುವಂತೆ ಕರೆ ನೀಡಿದರು.
ಇದೇ ಸಂದರ್ಭಲ್ಲಿ ವಿದ್ಯಾರ್ಥಿಗಳು ಭಾಷಣ, ಗಾಯನ, ನೃತ್ಯವನ್ನು ಪ್ರದರ್ಶಿಸುವುದರ ಮೂಲಕ ಕನ್ನಡಾಭಿಮಾನವನ್ನು ಮೆರೆದರು. ಆಕಾಶ ಮಾಯನ್ನವರ ಸ್ವಾಗತಿಸಿದರು.ಅಕ್ಷತಾ ಹುಲ್ಲೋಳಿ ಕಾರ್ಯಕ್ರಮವನ್ನು ನಿರೂಪಿಸಿದರು. ಶೃತಿ ತಂಗಡೆ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ನಂದಾ ಚಿನುಮರಿ, ಚಂದ್ರಶೇಖರ ಬನಟ್ಟಿ, ರಾಕೇಶ ಮಗದುಮ್ಮ, ಅಪ್ಪಾಸಾಹೇಬ ಅಕ್ಕೋಳೆ, ಡಾ. ರವಿ ಕುರಬೆಟ್ಟ, ನಿಶಾ ಮುನಸೆ ಹಾಗೂ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.





