ಚಿಕ್ಕೋಡಿ :–
ತಾಲುಕಿನ ಯಕ್ಸಂಬಾ ಪಟ್ಟಣದ
೭೦ನೇ ಕರ್ನಾಟಕ ರಾಜ್ಯೋತ್ಸವ
ಶಿವಶಂಕರ ಜೊಲ್ಲೆ ಕನ್ನಡ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಯಕ್ಸಂಬಾದಲ್ಲಿ ಕರ್ನಾಟಕ ರಾಜ್ಯೋತ್ಸವ ಅತಿ ವಿಜೃಂಭಣೆಯಿಂದ ಆಚರಿಸಿಲಾಯಿತು.

ಈ ಕಾರ್ಯಕ್ರಮವನ್ನು ಆಶಾಜ್ಯೋತಿ ವಿಶೇಷ ಮಕ್ಕಳ ವಸತಿ ಶಾಲೆಯ ಅಧ್ಯಕ್ಷರಾದ ಜ್ಯೋತಿಪ್ರಸಾದ ಅಣ್ಣಾಸಾಹೇಬ ಜೊಲ್ಲೆ ಅವರು ಭುವನೇಶ್ವರಿ ಮಾತೆಯ ಭಾವಚಿತ್ರಕ್ಕೆ ಪೂಜೆ ಮತ್ತು ಧ್ವಜಾರೋಹಣ ನೆರವೇರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಭಾಷಣ ಹಾಗೂ ನಾಡಿನ ಹೆಸರಾಂತ ಕವಿಗಳ ನುಡಿನಮನ ಹಾಗೂ ನೃತ್ಯಗಳು ಜರುಗಿದವು. ಸಹ ಶಿಕ್ಷಕರಾದ ವ್ಹಿ.ಬಿ.ಖೋತ ಮಾತನಾಡಿ ಕರ್ನಾಟಕ ರಾಜ್ಯದ ಕಲೆ, ಸಂಸ್ಕೃತಿ, ಆಚಾರ ವಿಚಾರಗಳ ಮಹತ್ವ ಹಾಗೂ ನಾವು ಎಲ್ಲೆ ಇರಲಿ ಹೇಗೆ ಇರಲಿ ಎಂದೆಂದಿಗೂ ಕನ್ನಡಿಗರಾಗಿರೋಣ ಎಂದು ಕನ್ನಡ ನಾಡಿನ ವಿಶೇಷತೆಯನ್ನು ಸಾರಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ವ್ಹಿ.ಆರ್.ಭಿವಸೆ ಮಾತನಾಡಿ ಕನ್ನಡ ನಾಡಿನ ಉಗಮ, ಕನ್ನಡ ಭಾಷೆಯ ಇತಿಹಾಸ ಹಾಗೂ ಕನ್ನಡ ರಾಜ್ಯೋತ್ಸವದ ಮಹತ್ವ, ಕನ್ನಡವು ಬರಿ ಭಾಷೆಯಲ್ಲ ಅದು ನಮ್ಮ ಸ್ವಾಭಿಮಾನ, ಸಂಸ್ಕೃತಿ, ಪರಂಪರೆ ಹಾಗೂ ನಮ್ಮ ಗುರುತು ಇದನ್ನು ಕಾಪಾಡುವುದು ನಮ್ಮ ಕರ್ತವ್ಯ, ಹಾಗಾಗಿ ಒಗ್ಗಟ್ಟಿನಿಂದ ಕನ್ನಡವನ್ನು ಕಾಪಾಡಿ ಉಳಿಸಿ, ಬೆಳೆಸೋಣ ಎಂದು ಮಾರ್ಮಿಕವಾಗಿ ನುಡಿದರು.

ಈ ಸಂದರ್ಭದಲ್ಲಿ ಕನ್ನಡ ನಾಡಿನ ವೈಶಿಷ್ಟತೆಯನ್ನು ಸಾರುವ ವಿವಿಧ ಕಾರ್ಯಕ್ರಮಗಳು ಹಾಗೂ ಕರ್ನಾಟಕ ಸ್ವಾತಂತ್ರ್ಯ ಮಹಿಳಾ ಹೋರಾಟಗಾರರ ರೂಪಕ ಪ್ರದರ್ಶನ ಮತ್ತು ಕನ್ನಡ ಭಾಷೆಯ ಮಹತ್ವವನ್ನು ಸಾರುವ ಘೋಷಣೆಗಳನ್ನು ಕುಗೂವುದರ ಮೂಲಕ ಊರಿನ ಪ್ರಮುಖ ಬೀದಿಗಳಲ್ಲಿ ಜಾಥಾ ಜರುಗಿದವು. ಈ ಸಂದರ್ಭದಲ್ಲಿ ಜೊಲ್ಲೆ ಎಜ್ಯೂಕೇಶನ್ ಸೊಸಾಯಟಿಯ ಆಡಳಿತ ಮಂಡಳಿಯ ಸದಸ್ಯರಾದ ಲತಾ ವಾಳಕೆ, ಸುಜಾತಾ ಕಬಾಡೆ, ಹಾಗೂ ಎಲ್ಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ರಕ್ಷಿತಾ ಕಬಾಡೆ ನಿರೂಪಿಸಿ, ಐಶ್ವರ್ಯ ಖೋತ ಸ್ವಾಗತಿಸಿ, ಜ್ಯೋತಿ ಹಿಂಗ್ಲಜೆ ವಂದಿಸಿದರು.





