“ಕೆರೂರ ಗ್ರಾಮದಲ್ಲಿ ಜಾಗೃತಿ ಬೀದಿನಾಟಕ ಪ್ರದರ್ಶನ”


ಚಿಕ್ಕೋಡಿ :–

ಮನುಷ್ಯನ ಬದುಕಿನಲ್ಲಿ ಸ್ವಾಭಿಮಾನ ಸ್ವಚೆಂದವಾಗಿ ಬದುಕಬೇಕಾದರೆ ಪ್ರತಿಯೊಬ್ಬ ಜನಸಾಮಾನ್ಯರಿಗೆ ಅಕ್ಷರದ ಅರಿವುಬೇಕು ಸಾಕ್ಷರಾತೆ ಕಲಿಕಾ ಕೇಂದ್ರಕ್ಕೆ ಬಂದು ಓದು ಬರಹ ಕಲಿಯುವ ಮನುಸ್ಸು ಮಾಡಬೆಕೆಂದು ಡಯಟ್‌ ಪ್ರಾಚಾರ್ಯಾರಾದ ಸಂಜಯ ಎಸ್ ಹುಲ್ಲೋಳಿ ಇವರು ಸಾರ್ವಜನಿಕರಿಗೆ ಕರೆ ನೀಡಿದರು.

ಅವರು ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಬೆಳಗಾವಿ ರಾಜ್ಯ ಶಿಕ್ಷಣ ಸಂಶೋದಣೆ ಮತ್ತು ತರಬೇತಿ ಇಲಾಖೆ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಚಿಕ್ಕೋಡಿ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗೆ ತಾಲುಕಿನ ಕೇರೂರ ಗ್ರಾ.ಪಂ ಸಹಯೋಗದ ಸ್ಥಳೀಯ ಬಸ್‌ ನಿಲ್ದಾಣ ಆವರಣದಲ್ಲಿ ಆಯೋಜಿಸಿದ ಸಾಕ್ಷರಾತ ಕಾರ್ಯಕ್ರಮ ಅನುಷ್ಟಾನ ಕಲಿಕಾ ವಾತಾವರಣ ನಿರ್ಮಾಣದ ಸಮುದಾಯ ಜಾಗೃತಿ ಮೂಡಿಸುವ ಬೀದಿನಾಟಕ ಕಾರ್ಯಕ್ರಮ ವಾದ್ಯ ನುಡಿಸಿ ಚಾಲನೆ ನೀಡಿ ಮಾತನಾಡಿ ಪ್ರತಿಯೊಂದು ದಿನ ನಿತ್ಯ ವ್ಯವಹಾರಕ್ಕೆ ಶಿಕ್ಷಣ ಪ್ರತಿಯೊಬ್ಬರಿಗೆ ದಾರಿದೀಪ ಪ್ರತಿಯೊಬ್ಬರ ಪ್ರಗತಿಗೆ ಅದು ಸಹಕಾರಿಯಾಗುತ್ತದೆ ಎಂದರು.

ಸಾಕ್ಷರಾತ ಕಾರ್ಯಕ್ರಮ ಸಹಾಯಕರಾದ ಶಂಕರ ಜಾಲಿಹಾಳ ಇವರು ಮಾತನಾಡಿ ಅಜ್ಞಾನ ಅಂದಕಾರ ದೂರಮಾಡಲು ಪ್ರತಿಯೊಬ್ಬರಿಗೂ ಶಿಕ್ಷಣ ಓದುಬರಹ ಅವಶ್ಯಕತೆ ಇದೆ ತಮ್ಮ ಕೆಲಸದಲ್ಲಿ ಬಿಡುವುಮಾಡಿಕೊಂಡು ಸಾಮಾನ್ಯ ಜ್ಞಾನಕ್ಕಾಗಿ ಅನಕ್ಷರಸ್ಥರು ಓದು ಬರಹ ತಿಳಿಯಬೆಕೆಂದುರು.
ಸಮಾರಂಭದಲ್ಲಿ ಸ್ಥಳಿಯ ಗ್ರಾಮ ಪಂಚಾಯತ ಅಧ್ಯಕ್ಷರಾದ ವಿರೇಂದ್ರ ಪಾಟೀಲ ಕೆ.ಪಿ.ಎಸ್ ಶಾಲೆ ಪ್ರಧಾನ ಗುರುಗಳಾದ ಎಸ್.ಬಿ ಖೋತ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಧುಳಗನವಾಡಿಯ ರಂಗದರ್ಶನ ಕಲಾತಂಡದವರು “ ಅಕ್ಷರ ಅರಿವು” ಬೀದಿನಾಟಕ ಜಾಗೃತಿ ಹಾಡುಗಳ ಮುಖಾಂತರ ಮನಮುಟ್ಟುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು ಕಲಾತಂಡದವರು ಯಕ್ಸಂಬಾ ಕಾರದಗಾ ಗ್ರಾಮದಲ್ಲಿಯೂ ಕೂಡಾ ಕಲಾಪ್ರದರ್ಶನ ನೀಡಿ ಅರಿವು ಮೂಡಿಸಿದರು. ಭರತ ಕಲಾಚಂದ್ರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Share this post:

Leave a Reply

Your email address will not be published. Required fields are marked *

You cannot copy content of this page