ಬೆಂಗಳೂರು :–
ಬೆಳಗಿನ ತಣ್ಣನೆಯ ಸ್ನಾನ ಮೆದುಳಿನ ಪಾರ್ಶ್ವವಾಯುವಿಗೆ ಕಾರಣ ಎಂಬ ಹೇಳಿಕೆಯನ್ನು ವೈದ್ಯರು ತಳ್ಳಿಹಾಕಿದ್ದಾರೆ. ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ನರವಿಜ್ಞಾನಿ ಡಾ.ಯತಿನ್ ಸಲ್ವೇಕರ್,

ಶೀತಕ್ಕೆ ಒಡ್ಡಿಕೊಳ್ಳುವುದರಿಂದ ರಕ್ತದೊತ್ತಡ, ಹೃದಯ ಬಡಿತ ಸ್ವಲ್ಪ ಹೆಚ್ಚಾಗಬಹುದು. ಆದರೆ ಆರೋಗ್ಯವಂತರಿಗೆ ಪಾರ್ಶ್ವವಾಯು ಅಪಾಯವಿಲ್ಲ ಎಂದು ತಿಳಿಸಿದ್ದಾರೆ..
ಯುವಕರಲ್ಲಿ 74% ಪಾರ್ಶ್ವವಾಯು ತಣ್ಣನೆಯ ಸ್ನಾನದ ನಂತರ ಸಂಭವಿಸುತ್ತದೆ ಎಂಬ ವೈರಲ್ ಹೇಳಿಕೆಗೆ ವೈದ್ಯಕೀಯ ಪುರಾವೆಗಳಿಲ್ಲ ಎಂದು ಅವರು ಹೇಳಿದ್ದಾರೆ.





