“ಧುಳಗನವಾಡಿಯಲ್ಲಿ 110 ನೇ ಚಿಂತನಗೋಷ್ಠಿ”


ಚಿಕ್ಕೋಡಿ :–

ಕನ್ನಡ ಭಾಷೆ ಉಳಿಸುವಲ್ಲಿ ನಮ್ಮ ಗ್ರಾಮಿಣ ಜನಪದ ಕಲಾವಿದರ ಪಾತ್ರ ಪ್ರಮುಖವಾಗಿದೆ ಕಲಾವಿದ ಹಳ್ಳಿಯ ಸೊಗಡಿನ ಪರಂಪರೆ ತತ್ವಪದ ಡೊಳ್ಳಿನಪದ ಗೀಗೀಪದ ಮುಂತಾದ ಜಾನಪದ ಹಾಡುವದರಿಂದ ಕನ್ನಡ ಭಾಷೆ ರಸಸ್ವಾದವಾಗಿ ಹೊರಹೊಮುತ್ತದೆ.

ಅಂತಹ ಬಾಷೆಗೆ ಕಲಾವಿದರು ಪ್ರೇರಣಾ ಶಕ್ತಿಯಾಗಿದ್ದಾರೆಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶರಣರಾದ ಎಸ್.‌ ಆರ್‌ ಡೊಂಗರೆ ಅಭಿವ್ಯಕ್ತ ಪಡಿಸಿದರು ಅವರು ಕಳೆದ ರವಿವಾರ ನವ್ಹೆಂಬರ 02 ರಂದು ಸದ್ಗುರು ಶರಣರ ಕಲಾಸೇವಾ ಮಂಡಳ ಖೋತ ಪರಿವಾರ ಧುಳಗನವಾಡಿ ಇವರ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ 110 ನೇಯ ಸುವಿಚಾರ ಚಿಂತನಗೋಷ್ಟಿ ಭಜನಾ ಕಾರ್ಯಕ್ರಮ ವಾದ್ಯ ನುಡಿಸಿ ಚಾಲನೆ ನೀಡಿ ಮಾತನಾಡಿ ಮನಸ್ಸಿಗೆ ಪರಮಾನಂದ ಸಿಗುವದು. ಪಾರಮಾರ್ಥದಿಂದ ಚರಿತ್ರೆ ಮತ್ತು ಚ್ಯಾರಿತ್ರೆ ಉಳಿಯಬೇಕೆಂದರೆ ಬದುಕಿದಾಗ ಸತ್ಸಂಗದಲ್ಲಿ ಬೆರೆತು ಸಾರ್ಥಕ ಜೀವನ ನಡೆಸಬೆಕೆಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಮಾತೋಶ್ರೀ ಸಾವಿತ್ರಿ ವಿಜಯನಗರೆ ಮಾತನಾಡಿ ಹೆತ್ತ ತಾಯಿ ಜನ್ಮ ಕೊಟ್ಟ ಭೂಮಿ ತಾಯ್ನಾಡಿನ ಭಾಷೆಯನ್ನು ಮರೆಯಬಾರದು ಬಸವಾದಿ ಶಿವಶರಣರು ಕನ್ನಡ ಭಾಷೆಯಲ್ಲಿ ತ್ರಿಪದಿ ವಚನಗಳನ್ನು ಬರೆದು ನಮ್ಮೆಲ್ಲರಿಗೂ ಜ್ಞಾನೋದಯ ಮುಡಿಸಿದ್ದಾರೆ ಭಾಷೆ ಕಲೆ ಸಂಸ್ಕೃತಿ ಉಳಿಸುವದು ಪ್ರತಿಯೋಬ್ಬ ಕನ್ನಡಿಗರನ ಜವಾಬ್ದಾರಿಯಾಗಿದೆ ಎಂದರು ಕಾರ್ಯಕ್ರಮದಲ್ಲಿ ಪ್ರಗತಿ ಪರ ರೈತ ಕಲ್ಲಪ್ಪ ಜನವಾಡೆ, ಅಪ್ಪಾಸಾಬ ಖೋತ, ವಿಜಯ ವಾಘಮಾರೆ, ಉಪಸ್ಥಿತರಿದ್ದರು.

ವೀರಗಾಸೆ ಜಾನಪದ ಕಲಾವಿದ ಅಣ್ಣಪ್ಪಾ ಖಡ್ಡ ನವಲಿಹಾಳ ಹಾಗೂ ಕಿರಣ ವಿಜಯನಗರೆ ಖಡಕಲಾಟ ಇವರಿಗೆ ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಹೇಶ ಪಕಾಲೆ ಸಂತ್ರಾಮ ಕಾಂಬಳೆ ವಾದ್ಯ ಸಹಕಾರ ನೀಡಿದರು ಶರಣ ಧನಪಾಲ ಕಮತೆ ಪ್ರಸ್ತಾವಿಕವಾಗಿ ಮಾತನಾಡಿದರು. ಭರತ ಕಲಾಚಂದ್ರ ಕಾರ್ಯಕ್ರಮ ನಿರೂಪಿಸಿದರು. ಓಂಕಾರ ಖೋತ ಸ್ವಾಗತಿಸಿದರು ಸುಜಾತಾ ಮಗದುಮ್ಮ ವಂದಿಸಿದರು.

Share this post:

Leave a Reply

Your email address will not be published. Required fields are marked *

You cannot copy content of this page