ಬೆಂಗಳೂರು :–
ನಾವೇ ಬ್ಯಾಂಕ್ ನಿಂದ ಬಡ್ಡಿ ತೆಗೆದುಕೊಂಡು ಸಕ್ಕರೆ ಕಾರ್ಖಾನೆಗಳನ್ನು ನಡೆಸುತ್ತಿದ್ದೇವೆ. ಹೀಗೆ ಕಷ್ಟದಲ್ಲಿ ಇರುವಾಗ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆ ಅಸಾಧ್ಯವಾದ ಮಾತಾಗಿದೆ.
ಬೇಕಾದ್ರೆ ಕಷ್ಟದಲ್ಲಿರುವಂತ ನಮ್ಮ ಸಕ್ಕರೆ ಕಾರ್ಖಾನೆಗಳನ್ನು ಸರ್ಕಾರವೇ ತೆಗೆದುಕೊಂಡು ನಡೆಸಲು ನಾವು ಮಾತ್ರ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸೋದಕ್ಕೆ ಅಸಾಧ್ಯ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದೆ ಸಕ್ಕರೆ ಕಾರ್ಖಾನೆ ಮಾಲೀಕರು ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ.
ಈಹೊತ್ತು ಸಿಎಂ ಸಿದ್ಧರಾಮಯ್ಯ ಅವರು ರಾಜ್ಯದ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜೊತೆಗೆ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಸಿಎಂ ಮುಂದೆ ತಮ್ಮ ಕಷ್ಟದ ಅಳಲನ್ನು ಸಕ್ಕರೆ ಕಾರ್ಖಾನೆ ಮಾಲೀಕರು ತೋಡಿಕೊಂಡರು.
ಉತ್ತರ ಭಾರತದ ಸಕ್ಕರೆ ಕಾರ್ಖಾನೆಗಳಿಗೆ ಹೆಚ್ಚು ಅನುಕೂಲ ಆಗುವಂತಿದೆ. ಸಕ್ಕರೆ ಉತ್ಪಾದನೆ, ಮಾರಾಟದಲ್ಲಿ ಅವರಿಗೆ ಅನುಕೂಲವಾಗ್ತಿದೆ. ದಕ್ಷಿಣ ಭಾರತದ ಕಾರ್ಖಾನೆಗಳಿಗೆ ಅನ್ಯಾಯ ಆಗುತ್ತಲೇ ಇದೆ. ಉತ್ತರ ಭಾರತದ ಕಾರ್ಖಾನೆ ಮಾಲೀಕರು ಕೇಂದ್ರದ ವಿರುದ್ಧ ಧ್ವನಿ ಎತ್ತುವುದಿಲ್ಲ. ನಾವು ಧ್ವನಿ ಎತ್ತಿಯೂ ಪ್ರಯೋಜನ ಆಗುತ್ತಿಲ್ಲ ಎಂಬ ಅಳಲು ತೋಡಿಕೊಂಡಿದ್ದಾರೆ. ಬೇಕಾದ್ರೆ ಕಷ್ಟದಲ್ಲಿರುವಂತ ನಮ್ಮ ಸಕ್ಕರೆ ಕಾರ್ಖಾನೆಗಳನ್ನು ಸರ್ಕಾರವೇ ತೆಗೆದುಕೊಂಡು ನಡೆಸಲಿ.
ನಾವು ಮಾತ್ರ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸೋದಕ್ಕೆ ಅಸಾಧ್ಯ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದೆ ಸಕ್ಕರೆ ಕಾರ್ಖಾನೆ ಮಾಲೀಕರು ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ.





