ಚಿಕ್ಕೋಡಿ :–
ಕರ್ನಾಟಕ ಸರ್ಕಾರ
ಶಾಲಾ ಶಿಕ್ಷಣ ಇಲಾಖೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ
ಜೊಲ್ಲೆ ಎಜ್ಯೂಕೇಶನ್ ಸೊಸಾಯಟಿ,ಯಕ್ಸಂಬಾ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ಸ್ಥಳೀಯ ಸಂಸ್ಥೆ, ಚಿಕ್ಕೋಡಿ
ಇವರುಗಳ ಸಂಯುಕ್ತಾಶ್ರಯದಲ್ಲಿ
ಜೊಲ್ಲೆ ಎಜ್ಯೂಕೇಶನ್ ಸೊಸಾಯಟಿಯ ವಿವಿಧ ಅಂಗ ಸಂಸ್ಥೆಗಳ ಸ್ಕೌಟ್ಸ್ ಘಟಕಗಳ
ಉದ್ಘಾಟನಾ ಸಮಾರಂಭ
ಜೊಲ್ಲೆ ಎಜ್ಯೂಕೇಶನ್ ಸೊಸಾಯಟಿಯ ವಿವಿಧ ಅಂಗ ಸಂಸ್ಥೆಗಳ ಸ್ಕೌಟ್ಸ್ ಘಟಕಗಳ ಉದ್ಘಾಟನಾ ಸಮಾರಂಭವನ್ನು ತಾಲುಕಿನ ಯಕ್ಸಂಬಾದ ಶ್ರೀ ಬೀರೇಶ್ವರ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿಕೊಂಡಿರುವ ಪಿ.ಜಿ.ಆರ್ ಸಿಂಧ್ಯಾ ರಾಜ್ಯ ಮುಖ್ಯ ಆಯುಕ್ತರು ಹಾಗೂ ಮಾಜಿ ಸಚಿವರು, ಕರ್ನಾಟಕ ಸರಕಾರ, ಚಾಲನೆ ನೀಡಿ ಸ್ಕೌಟ್ಸ್ ಗೈಡ್ಸ್ ಸಂಘಟನೆಯು ರಾಷ್ಟ್ರೀಯ, ಪರಿಸರ ಪ್ರಜ್ಞೆ, ತಂತ್ರಜ್ಞಾನ, ಶಿಸ್ತು, ಸಮಯಪ್ರಜ್ಞೆ ಬೆಳೆಸುವುದರ ಜೊತೆಗೆ ಮಾನಸಿಕವಾಗಿ, ದೈಹಿಕವಾಗಿ ಸದೃಢರನ್ನಾಗಿಸಿ ಮಕ್ಕಳಲ್ಲಿನ ಭಯ ದೂರ ಮಾಡಿ ಆರೋಗ್ಯದ ಶುಚಿತ್ವ ಕಲಿಸುತ್ತದೆ. ಇದರಿಂದ ದೇಶದ, ಸಮಾಜದ ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕೆಂದು ಮಕ್ಕಳಿಗೆ ಮಾರ್ಗದರ್ಶನ ನೀಡುವುದರೊಂದಿಗೆ ತಮ್ಮ ಜೀವನದ ಮಧುರ ಕ್ಷಣಗಳನ್ನು ಹಂಚಿಕೊಂಡರು.

ಪ್ರಮುಖ ಉಪಸ್ಥಿತಿ ವಹಿಸಿದ ಜೊಲ್ಲೆ ಗ್ರೂಪ್ ಉಪಾಧ್ಯಕ್ಷರಾದ ಬಸವಪ್ರಸಾದ ಜೊಲ್ಲೆ ಪ್ರಸ್ತಾವಿಕವಾಗಿ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿ ಸಮಾಜದ ಕೆಳವರ್ಗದ ಜನರಿಗೆ ಕೈಗೆಟುಕುವ ಶುಲ್ಕದಲ್ಲಿ ಶಿಕ್ಷಣ ನೀಡುವುದು ಜೊಲ್ಲೆ ಎಜ್ಯೂಕೇಶನ್ ಸೊಸಾಯಟಿಯ ಉದ್ದೇಶವಾಗಿದೆ. ಅದಕ್ಕೊಸ್ಕರ ಶಿಕ್ಷಣದಲ್ಲಿ ವಿನೂತನ ಯೋಜನೆಗಳನ್ನು ರೂಪಿಸುತ್ತಾ ಸಂಸ್ಥೆಯು ಇವತ್ತು ಸಮಾಜದ ಸಹಕಾರದೊಂದಿಗೆ ಹೆಮ್ಮರವಾಗಿ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಅತಿಥಿ ಸ್ಥಾನವನ್ನು ಅಲಂಕರಿಸಿದ ಗಜಾನನ ಮನ್ನಿಕೇರಿ ಉಪಾಧ್ಯಕ್ಷರು, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ಹಾಗೂ ಜಿಲ್ಲಾ ಮುಖ್ಯ ಆಯುಕ್ತರು, ಬೆಳಗಾವಿ ಮಾತನಾಡಿ ಗ್ರಾಮೀಣ ಮಟ್ಟದಲ್ಲಿ ಸಂಸ್ಥೆಯು ಹೆಮ್ಮರವಾಗಿ ಬೆಳೆದು ಸಾವಿರಾರು ವಿದ್ಯಾರ್ಥಿಗಳಿಗೆ ಪಟ್ಟಣದ ಮಾದರಿಯಲ್ಲಿ ಸುಸಜ್ಜಿತ ಕಟ್ಟಡ ಹಾಗೂ ಸಕಲ ಸೌಲಭ್ಯಗಳೊಂದಿಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಜೊಲ್ಲೆ ಎಜ್ಯೂಕೇಶನ್ ಸೊಸಾಯಟಿಯ ಪಾತ್ರ ಅತಿ ಮುಖ್ಯ ಎಂದು ಪ್ರಶಂಶಿಸುವುದರೊಂದಿಗೆ ಸ್ಕೌಟ್ಸ್ ಗೈಡ್ಸ್ ಘಟಕಗಳ ಕಾರ್ಯಗಳನ್ನು ಅವುಗಳ ಉದ್ದೇಶ ಹಾಗೂ ಇದರಿಂದ ಮಕ್ಕಳಿಗೆ ಆಗುವ ಉಪಯೋಗಗಳನ್ನು ತಿಳಿಸಿದರು.

ಇನ್ನೊರ್ವ ಅತಿಥಿಗಳಾದ ಪ್ರಭಾಕರ ಭಟ್ಟ ರಾಜ್ಯ ಸಂಘಟನಾ ಆಯುಕ್ತರು, ಸ್ಕೌಟ್ ವಿಭಾಗ ಭಾರತ್ ಸ್ಕೌಟ್ಸ್& ಗೈಡ್ಸ್ ಕರ್ನಾಟಕ ವಿದ್ಯಾರ್ಥಿಗಳಲ್ಲಿ ಆಧ್ಯಾತ್ಮಿಕ, ಮಾನಸಿಕ, ದೈಹಿಕ, ಸಾಂಸ್ಕೃತಿವಾಗಿ ಪ್ರಜ್ಞಾವಂತರಾಗಲು ಸ್ಕೌಟ್ಸ್ ಗೈಡ್ಸ್ ಮತ್ತು ಕಬ್ಸ್ ಬುಲ್‌ಬುಲ್ ಘಟಕಗಳು ಹೇಗೆ ಸಹಾಯಕವಾಗಿವೆ ಎಂಬುದರ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಇತ್ತಿಚಿಗೆ ಪ್ರಕಟಿಸಿದ ಚಾರ್ಟರ್ಡ ಅಕೌಂಟೆಂಟ್(CA) ಪರೀಕ್ಷೆಯಲ್ಲಿ ಪಾಸಾದ
ಶಿವಶಂಕರ ಜೊಲ್ಲೆ ಕನ್ನಡ ಶಾಲೆಯ ಮಾಜಿ ವಿದ್ಯಾರ್ಥಿಯಾದ ಸಾಜೀದ ಅಸ್ಲಂ ಜಮಾದಾರ ಇತನಿಗೆ ಸಂಸ್ಥೆಯ ಪರವಾಗಿ ಅಭಿನಂದಿಸಿ ಸತ್ಕರಿಸಲಾಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಅಧ್ಯಕ್ಷ ಸ್ಥಾನವನ್ನು ವಹಿಸಿದ ಶಶಿಕಲಾ ಜೊಲ್ಲೆ ಸಹಸಂಸ್ಥಾಪಕರು ಜೊಲ್ಲೆ ಗ್ರೂಪ್, ಮಾಜಿ ಸಚಿವರು ಹಾಗೂ ಶಾಸಕರು, ನಿಪ್ಪಾಣಿ ಮಾತನಾಡಿ ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸಲು ನಿರಂತರ ಓದು, ಗಟ್ಟಿಯಾದ ಗುರಿ ಹಾಗೂ ದೃಢವಾದ ಆತ್ಮವಿಶ್ವಾಸ ಇಟ್ಟುಕೊಂಡು ನಾನು ಜಯಿಸಬಲ್ಲೆ ಎಂದು ಧನಾತ್ಮಕವಾಗಿ ಸದಾ ಮುನ್ನುಗ್ಗುತ್ತಿರಬೇಕು ಹಾಗೂ ಸರ್ವತೋಮುಖ ಬೆಳವಣಿಗೆಯಾಗಲು ದೇಶಾಭಿಮಾನ, ಶಿಕ್ಷಣ, ಸಂಸ್ಕೃತಿ ಶಿಸ್ತು, ಸಾಧನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆ, ಎನ್ ಜಿ ಪಾಟೀಲ, ವಿಠ್ಠಲ ಎಸ್.ಬಿ, ಎಸ್ ಬಿ ಚೌಗಲೆ, ಸಂಸ್ಥೆಯ ಸಂಯೋಜನಾಧಿಕಾರಿಗಳಾದ ಎಮ್ ಎಮ್ ಪಾಟೀಲ ಹಾಗೂ ಮುಖ್ಯೋಪಾಧ್ಯಾಯರಾದ ವ್ಹಿ ಆರ್ ಭಿವಸೆ, ವಿಜಯ ನಾಯಿಕ ಉಪಸ್ಥಿತರಿದ್ದರು. ಪ್ರಚಾರ್ಯರಾದ ಯು. ಸಿ. ಚೌಗಲಾ ಸ್ವಾಗತಿಸಿದರು, ಕಾರ್ಯಕ್ರಮವನ್ನು ಆಕಾಶ ಮಾಯನ್ನವರ ಹಾಗೂ ಕಮಲ ಪಾಟೀಲ ನಿರೂಪಿಸಿ, ಪ್ರಾಚಾರ್ಯರಾದ ನಂದಾ ಚುನುಮರಿ ವಂದಿಸಿದರು.





