ಬೆಂಗಳೂರು :–
ಬೆಂಗಳೂರು ನಗರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದ್ದು, ಅನೇಕ ದೇಶಗಳಿಂದ ಇಲ್ಲಿಗೆ ಬರುತ್ತಾರೆ. “ಏರ್‌ಪೋರ್ಟ್‌ಗಳಲ್ಲಿ ಬೇರೆ ಧರ್ಮದವರಿಗೆ ಪ್ರಾರ್ಥನೆ ಮಾಡಲು ಪ್ರತ್ಯೇಕ ಕೊಠಡಿ” ಕೊಡುವುದು ಒಳ್ಳೆಯದು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಎಂದರು ಏರ್‌ಪೋರ್ಟ್‌ನಲ್ಲಿ ನಮಾಜ್ ಮಾಡಿದ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಇಂತಹದ್ದಕ್ಕೆ ಕಾಯ್ದೆ ತರೋದು ಬೇರೆ.
ಹಲವಾರು ದೇಶಗಳಲ್ಲಿ ಬೇರೆ ಧರ್ಮದವರು ಪಾರ್ಥನೆ ಮಾಡೋಕೆ ಪ್ರತ್ಯೇಕ ಕೊಠಡಿಯನ್ನ ಕೊಡ್ತಾರೆ. ಅವರವರ ಧರ್ಮದ ಪಾರ್ಥನೆ ಮಾಡಲು ಕೊಡ್ತಾರೆ. ಸಾರ್ವಜನಿಕವಾಗಿ ಅಂತಹ ಕಡೆ ಕೊಡೋದಕ್ಕಿಂತ ಒಂದು ಕೊಠಡಿ ಕೊಡೋದು ಉತ್ತಮ ಎಂದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ನಗರ ಬೆಳೆದಿದೆ. ಅನೇಕ ದೇಶಗಳಿಂದ ಅನೇಕ ಧರ್ಮದ ಜನರು ಬರುತ್ತಾರೆ. ಈ ವಿಚಾರದಲ್ಲಿ ಸಣ್ಣತನವನ್ನು ತೋರಿಸಬಾರದು. ಅವರಿಗಾಗಿ ಒಂದು ಕೊಠಡಿ ಮೀಸಲಿಟ್ಟಿದ್ದಲ್ಲಿ ಅವರ ಧರ್ಮವನ್ನು ಪಾಲನೆ ಮಾಡುತ್ತಾರೆ.
ಆರ್‌ಎಸ್‌ಎಸ್ ಬಗ್ಗೆ ಮಾತಾಡೋದು ಅವಶ್ಯಕತೆ ಇಲ್ಲ. ಇದಕ್ಕೆಲ್ಲ ಒಂದು ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಸಮಸ್ಯೆ, ಅನಾನುಕೂಲ ಆಗದೇ ಇರುವ ರೀತಿಯಲ್ಲಿ ತೀರ್ಮಾನ ವಾದರೆ ಎಲ್ಲರು ಮೆಚ್ಚುತ್ತಾರೆ ಎಂದು ಹೇಳಿದರು.





