ಐಸಿಸಿ ಎರಡು ಹಂತದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ವ್ಯವಸ್ಥೆಯ ಕಲ್ಪನೆಯನ್ನು ರದ್ದುಗೊಳಿಸಿದೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಮಾಡಿದೆ.
ರಾಷ್ಟ್ರಗಳನ್ನು ಎರಡು ಹಂತಗಳಾಗಿ ವಿಭಜಿಸುವ ಯೋಜನೆಗಳು ವ್ಯಾಪಕ ಬೆಂಬಲವನ್ನು ಪಡೆಯುವಲ್ಲಿ ವಿಫಲವಾಗಿವೆ ಎಂದು ವರದಿ ತಿಳಿಸಿದೆ.
ಹಣಕಾಸಿನ ಮಾದರಿಯನ್ನು ಕಾರ್ಯಗತಗೊಳಿಸಬಹುದೇ ಎಂಬ ಅನುಮಾನಗಳು ಎರಡು ಹಂತದ ಮಾದರಿಯನ್ನು ತಪ್ಪಿಸಲು ಕಾರಣವಾಯಿತು ಎಂದು ವರದಿ ಯಲ್ಲಿ ತಿಳಿಸಲಾಗಿದೆ.





