ಚಿಕ್ಕೋಡಿ :–
ನಮ್ಮ ದೇಶದ ಹೆಮ್ಮೆಯ ಪುರಾತನ ವೈದ್ಯ ಪದ್ದತಿಯಾದ ಆಯುರ್ವೇದ ಜನರ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ವಿಜ್ಞಾನವಾಗಿದ್ದು. ಇದು ಜನರ ಕಾಯಿಲೆಗಳನ್ನು ಸಂಪೂರ್ಣವಾಗಿ ಗುಣಪಡಿಸಲು ನಮ್ಮ ಪೂರ್ವಜರು ನಮಗೆ ಕೊಟ್ಟಿರುವ ಅಮೂಲ್ಯ ಕೊಡುಗೆ ಎಂದು ಚಿಂಚಣಿ ಅಲ್ಲಮ ಪ್ರಭು ಸಿದ್ಧ ಸಂಸ್ಥಾನ ಮಠದ ಶ್ರೀ ಶಿವಕುಮಾರ ದೇವರು ಆಶೀರ್ವಚನ ನೀಡಿದರು ಅವರು ಸ್ಥಳೀಯ ಕೆ ಎಲ್ ಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಚಿಕ್ಕೋಡಿ ಹಾಗೂ ಗ್ರಾಮ ಪಂಚಾಯಿತಿ ಚಿಂಚಣಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ವೈದ್ಯ ಪದ್ದತಿಯ ಕೇಂದ್ರೀಯ ಪರಿಷತ್ ನವದೆಹಲಿ ನಿರ್ದೇಶಿತ ಜೀವನೀಯ-ಆಯುರ್ವೇದ ಆರೋಗ್ಯ ಮಿತ್ರ ಅಭಿಯಾನದ ಗ್ರಾಮೀಣ ಸಮುದಾಯ ಜನರ ಆರೋಗ್ಯ ಸಂರಕ್ಷಣೆಯಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಯ ಸಂಯೋಜನೆಯ ವಿಶೇಷ ಸರ್ವೇಕ್ಷಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಇಂದು ಮಾತನಾಡಿದರು.

ಆಯುರ್ವೇದ ಕಲಿಯಲು ಬಂದಿರುವ ಎಲ್ಲ ವಿದ್ಯಾರ್ಥಿಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವ ಗುರುತರವಾದ ಜವಾಬ್ದಾರಿಯನ್ನು ದೇವರು ತಮಗೆ ಕರುಣಿಸಿದ್ದು ಸಮಯ ಹಾಗೂ ಜ್ಞಾನಾಧಾರಿತ ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿದ್ಯಾರ್ಥಿ ಜೀವನದ ಸಾರ್ಥಕತೆಯನ್ನು ಅನುಭವಿಸಿ ತನ್ಮೂಲಕ ಹೆತ್ತವರ, ಊರಿನ ಸಂಸ್ಥೆಯ ಹೆಸರನ್ನು ಬೆಳೆಸಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಕಿರಣಕುಮಾರ ಮುತ್ನಾಳಿ ಮಾತನಾಡಿ ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ ಪ್ರಭಾಕರ ಕೋರೆಯವರ ಮಾರ್ಗದರ್ಶನದಲ್ಲಿ ಪ್ರತಿ ಮನೆ ಮನೆಗೆ ಆಯುರ್ವೇದ ಪದ್ದತಿಯನ್ನು ತಲುಪಿಸುವ ಉದ್ದೇಶದಿಂದ ಚಿಂಚಣಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದು ಗ್ರಾಮಸ್ಥರ ಹಾಗೂ ಶ್ರೀ ಮಠದ ಸಹಕಾರ ಕೊರುತ್ತಾ ವೈದ್ಯ ವಿದ್ಯಾರ್ಥಿಗಳಿಗೆ ಪೂರಕ ಮಾಹಿತಿ ಒದಗಿಸಲು ವಿನಂತಿಸಿ ಈ ವರ್ಷ ೧೦೦ ಮನೆಗಳನ್ನು ದತ್ತು ಪಡೆದು ಅವರ ಆರೋಗ್ಯದ ಕಾಳಜಿ ನಮ್ಮ ಮೇಲಿದೆ ಎಂದು ಹೇಳಿದರು.
ಚಿಂಚಣಿ ಗ್ರಾಮ ಪಂಚಾಯತ ಅದ್ಯಕ್ಷರಾದ ಲಕ್ಷಣ ಡಂಗೇರ, ಸಂಜೀವ ಪಾಟೀಲ್, ಬಾಲಗೌಡ ಪಾಟೀಲ್ ಮಾತನಾಡಿದರು. ಡಾ. ಸಂತೋಷ ಶಿವಣ್ಣವರ ಅಭಿಯಾನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು, ಗ್ರಾಮ ಪಂಚಾಯತ ಉಪಾದ್ಯಕ್ಷರಾದ ಸೌರಭ ಪಾಟೀಲ್, ಸದ್ಯಸರು, ಕೆ ಎಲ್ ಇ ಯ ಆಯುರ್ವೇದ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದರು ಕಾರ್ಯಕ್ರಮವನ್ನು ಡಾ. ಸುಧೀಂದ್ರ ಹೊನವಾಡ ಸ್ವಾಗತಿಸಿದರು, ಡಾ. ವಿಜಯ ಹೂಗಾರ ವಂದಿಸಿದರು





