ಮೈಸೂರು :–
ಮೈಸೂರಿನ ಕುವೆಂಪು ನಗರದಲ್ಲಿ ನಿರ್ಮಾಣವಾಗುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಹೊಸ ನಿವಾಸಕ್ಕೆ ವಿದ್ಯುತ್ ಸಂಪರ್ಕ ನೀಡಲು ಇತ್ತೀಚಿಗೆ ಜಾರಿಯಾಗಿರುವ ನಿಯಮಗಳು ಅಡ್ಡಿಯಾಗಿವೆ ಎಂದು ವರದಿಯಾಗಿದೆ.
ವಿದ್ಯುತ್ ಸಂಪರ್ಕ ಪಡೆಯಲು ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪ್ರಮಾಣ ಪತ್ರ (ಒಸಿ) ಕಡ್ಡಾವಾಗಿದ್ದು, ಸಿಎಂ ಮನೆಗೆ ಒಸಿ ಇಲ್ಲ ಎಂದು ವರದಿ ಹೇಳಿದೆ.
ಕಟ್ಟದ ವಿಸ್ತೀರ್ಣ ಪರಿಗಣಿಸದೆ ನಿರ್ಮಾಣಗೊಂಡ ಮನೆಗಳಿಗೆ ಒಂದೇ ಸಲ ವಿದ್ಯುತ್ ಸಂಪರ್ಕ ನೀಡಲು ಇಂಧನ ಇಲಾಖೆ ಪರಿಗಣಿಸಿದೆ ಎಂದು ವರದಿಯಲ್ಲಿ ತಿಳಿಸಿದೆ.





