“ಗೋವಾ ರಾಜ್ಯದ ಡಿಚೋಲಿಯಲ್ಲಿ ಬೀರೇಶ್ವರ 231 ನೇ ಶಾಖೆ ಉದ್ಘಾಟನೆ” 

ಚಿಕ್ಕೋಡಿ :–

ಗುರುವಾರ ಗೋವಾ ರಾಜ್ಯದಲ್ಲಿ ಜೊಲ್ಲೆ ಗ್ರೂಪ್ ನ ಅಂಗಸಂಸ್ಥೆಯಾದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೋಸಾಯಿಟಿ ಲಿ.,ಯಕ್ಸಂಬಾ (ಮಲ್ಟಿ-ಸ್ಟೇಟ್) 231 ನೇ ನೂತನ “ಶಾಖೆ- ಡಿಚೋಲಿ”  ಇದರ ಉದ್ಘಾಟನೆ ಹಾಗೂ ಪೂಜಾ ಸಮಾರಂಭವನ್ನು ಗೋವಾ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ದಾಮುಜಿ ನಾಯಿಕ ಹಾಗೂ ಗಣ್ಯರು,ಸ್ಥಳೀಯ ಮುಖಂಡರು  ನೂತನ ಶಾಖೆಯನ್ನು ಉದ್ಘಾಟಿಸಿ,ಚಾಲನೆ ನೀಡಿದರು.

ಗೋವಾ ಬಿಜೆಪಿ ರಾಜ್ಯಾಧ್ಯಕ್ಷರಾದ ದಾಮುಜಿ ನಾಯಿಕ ಮಾತನಾಡಿ ಬೀರೇಶ್ವರ ಸಂಸ್ಥೆಯು ಒಂದೇ ಸೂರಿನಡಿ ಎಲ್ಲಾ ಸೇವೆಗಳನ್ನು ಒದಗಿಸುತ್ತಿದೆ.ಬೀರೇಶ್ವರ ಸಂಸ್ಥೆಯು ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾಗಿದ್ದು ಇದರಿಂದ ಗೋವಾ ರಾಜ್ಯದ ಜನರ ಆರ್ಥಿಕ ಪ್ರಗತಿಗೆ ಸಹಕಾರಿಯಾಗಿದೆ. ಸಾರ್ವಜನಿಕರು ತಮ್ಮ ವ್ಯವಹಾರವನ್ನು ಮಾಡುವ ಮೂಲಕ ಶಾಖೆಯ ಪ್ರಗತಿ ಪಥದಲ್ಲಿ ಮುನ್ನಡೆಸಬೇಕು ಎಂದು ಮಾತನಾಡಿದರು.

ಪ್ರಭಾರ ಪ್ರಧಾನ ವ್ಯವಸ್ಥಾಪಕರಾದ ಬಹದ್ದೂರ ಗುರವ ಮಾತನಾಡಿ ಗೋವಾ ಬಿಜೆಪಿ ರಾಜ್ಯಾಧ್ಯಕ್ಷರಾದ ದಾಮುಜಿ ನಾಯಿಕ ಹಾಗೂ ನಾಯಕರು ಮೊದಲಿನಿಂದಲೂ ಜೊಲ್ಲೆ ಗ್ರೂಪ್ ನೊಂದಿಗೆ ಒಳ್ಳೆಯ ಸಂಬಂಧ ಒಡನಾಟ ಹೊಂದಿದ್ದು ನಮ್ಮ ಪ್ರತಿ ಕಾರ್ಯಕ್ರಮಗಳಿಗೆ ಶಾಖೆಯ ಉದ್ಘಾಟನೆಗೆ ಆಗಮಿಸಿ ಸಂಸ್ಥೆಯ ಶ್ರೇಯೋಭಿವೃದಿಗಾಗಿ ಸದಾ ಬದ್ಧರಾಗಿದ್ದಾರೆ.ಕಳೆದ ವರ್ಷ 2 ಶಾಖೆಯ ಉದ್ಘಾಟನೆಯನ್ನು ಗೋವಾ ಮುಖ್ಯಮಂತ್ರಿಯಾದ ಪ್ರಮೋದ ಸಾವಂತ ಅವರು ಉದ್ಘಾಟಿಸಿ ಅವರು ಕೂಡಾ ನಮ್ಮ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದು ಅವರ ಸಹಾಯ ಸಹಕಾರ ಹೀಗೆ ಇರಲಿ.ಅವರಿಗೆ ಜೊಲ್ಲೆ ಗ್ರೂಪ್ ವತಿಯಿಂದ ತುಂಬು ಹೃದಯದ ಧನ್ಯವಾದಗಳು ಹೇಳಿದರು.

ಉಪಪ್ರಧಾನ ವ್ಯವಸ್ಥಾಪಕರಾದ ರಮೇಶ ಕುಂಬಾರ ಮಾತನಾಡಿ ಕಳೆದ 35 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀ ಬೀರೇಶ್ವರ  ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯು ಕರ್ನಾಟಕ ಮಾತ್ರವಲ್ಲದೆ ಗೋವಾ ಮತ್ತು ಮಹಾರಾಷ್ಟ್ರಗಳಲ್ಲೂ ತನ್ನ 230 ಶಾಖೆಗಳನ್ನು ಹೊಂದಿದೆ. ಅಕ್ಟೋಬರ 30 ರವರೆಗೆ 4,588 ಕೋಟಿ ರೂ.ಠೇವಣಿ ಇದ್ದು, 3,610 ಕೋಟಿ ರೂ.ಸಾಲ ನೀಡಿದೆ.4 ಲಕ್ಷ 27 ಸಾವಿರಕ್ಕೂ ಹೆಚ್ಚು ಸದಸ್ಯರಿರುವ ಈ ಸೊಸೈಟಿ,ದಕ್ಷಿಣ ಭಾರತದ ಅತಿ ದೊಡ್ಡ  ಬಹುರಾಜ್ಯ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ ಎಂದರು. ಸಂಸ್ಥೆಯ ನಡೆದು ಬಂದ ದಾರಿ ಸಂಸ್ಥೆಯ ಸೇವೆಗಳ ಬಗ್ಗೆ ಪ್ರಸ್ತಾವಿಕವಾಗಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷರಾದ ದೀಪಾ ಪ್ರದೀಪ ಪಾಳ,ಸೌ.ರಂಜನಾ ಸಮೀರ್ ವೈಗಂಕರ್, ಶ್ರೀ ತನುಜ ರಾಜರಾಮ್ ಗಾಂಕರ್, ದೀಪಾ ಸುನಿಲ್ ಶೇಣ್ವಿ ಶಿರಗಾಂವ್ಕರ್, ಚಂದ್ರಕಾಂತ ಭೋಜೆ ಪಾಟೀಲ,ಕನ್ನಡ ಸಾಹಿತ್ಯ ಪರಿಷತ್ತು ಗೋವಾ ಘಟಕ ಅಧ್ಯಕ್ಷರಾದ ಸಿದ್ದಣ್ಣ ಮೇಟಿ, ಸಂಸ್ಥೆಯ ಪ್ರಭಾರ ಪ್ರಧಾನ ವ್ಯವಸ್ಥಾಪಕರಾದ  ಬಹದ್ದೂರ ಗುರವ, ಉಪ ಪ್ರಧಾನ ವ್ಯವಸ್ಥಾಪಕರಾದ ರಮೇಶ ಕುಂಬಾರ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ  ಶೇಖರ ಪಾಟೀಲ,ಗಣ್ಯರು,ಗ್ರಾಹಕರು ಮುಖಂಡರು ಉಪಸ್ಥಿತರಿದ್ದರು.

 

Share this post:

Leave a Reply

Your email address will not be published. Required fields are marked *

You cannot copy content of this page