ನಿಪ್ಪಾಣಿ :–
ಕಾರ್ಯಕರ್ತರ ಆಗಮನದಿಂದ ನಿಪ್ಪಾಣಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಮತ್ತಷ್ಟು ಬಲ ಶಾಸಕಿ ಶಶಿಕಲಾ ಜೊಲ್ಲೆ.
ತಾಲೂಕಿನ ಭಿವಶಿ ಗ್ರಾಮದ ಸ್ವ ಗ್ರಹದಲ್ಲಿ
ಗೌರವಾನ್ವಿತ ಪ್ರಧಾನಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದಿ ಜಿ ಅವರ ಕೇಂದ್ರ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ನಿಪ್ಪಾಣಿ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ನಿಪ್ಪಾಣಿ ಮತಕ್ಷೇತ್ರದ ಶೆಂಡೂರ ಗ್ರಾಮದ ಡೊಂಡಿರಾಮ ನಾರವೇಕರ,ಪಾಂಡುರಂಗ ನಾರವೇಕರ, ವಿಠ್ಠಲ ನಾರವೇಕರ, ಕುಟುಂಬದವರು ಹಾಗೂ ಜನಾರ್ಧನ ಮಾನೆ,ಕೃಷ್ಣಾ ಮಾನೆ,ಬಬನ ಶೆಂಡಗೆ ನಾರಾಯಣ ಪಾಟೀಲ ಸದಸ್ಯರು 50 ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ನಮ್ಮ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು,ಅವರನ್ನು ನಿಪ್ಪಾಣಿ ಶಾಸಕರಾದ ಶಶಿಕಲಾ ಜೊಲ್ಲೆ ಯವರು ಆತ್ಮೀಯವಾಗಿ ನಮ್ಮ ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡರು.

ಶಾಸಕಿ ಶಶಿಕಲಾ ಜೊಲ್ಲೆ ಕಳೆದ 15 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದಲ್ಲಿ ರಸ್ತೆ, ಚರಂಡಿ,ಅಂಗನವಾಡಿ,ಶಾಲೆ ದೇವಸ್ಥಾನ ಜೀರ್ಣೋದ್ಧಾರ,ಕುಡಿಯುವ ನೀರು,ಮೂಲಭೂತ ಸೌಕರ್ಯ ಮಾಡಿದ್ದು ಅದನ್ನು ಮೆಚ್ಚಿ ಶೆಂಡೂರ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು 50 ಕ್ಕಿಂತ ಅಧಿಕ ಬಿಜೆಪಿ ಕಾರ್ಯಕರ್ತರು ಬಿಜೆಪಿ ಇಂದು ಸೇರ್ಪಡೆಯಾದರು.ಗ್ರಾಮದಲ್ಲಿ ಈಗ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತಂದು ಗ್ರಾಮದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಶ್ರೀ ಮಲಗೊಂಡ ಪಾಟೀಲ,ನಿರ್ದೇಶಕರಾದ ರಾವಸಾಹೇಬಫರಾಲೆ, ಸಮೀತ ಸಾಸನೆ, ಸಿದ್ದು ನರಾಟೆ, ಮಧುಕರ ಪಾಟೀಲ ಗಣಪತಿ ಚೌಗಲೆ,ಆತ್ಮಾರಾಮ ಚೌಗಲೆ,ಶಿವಾಜಿ ಬೊಂಗಾಳೆ , ಬಾಬಾಸಾಹೇಬ ಕಾಂಬಳೆ,ಚಂದ್ರಕಾಂತ ಮಾನೆ,ಪ್ರವೀಣ ಗಿರಿ,ನಾಮದೇವ ಮಾನೆ,ಸಂತೋಷ ನಾಯಿಕ,ಅನಿಲ ನಾಯಿಕ,ಶಿವಾಜಿ ಚೌಗಲೆ,ರಾಜು ಲಾಡ,ಸಂದೀಪ ಪಾಟೀಲರಮೇಶ ತೊಡಕರ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.





