ಬೆಂಗಳೂರು :–
ಕುಡುಕರಿಗೊಬ್ಬ ದೇವರು, ತಿನ್ನುವವರಿಗೆ ಒಬ್ಬ ದೇವರು, ಹಿಂದೂ ದೇವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ತೆಲಂಗಾಣ ಸಿಎಂ
ತೆಲಂಗಾಣ ಸಿಎಂ ರೇವಂತ ರೆಡ್ಡಿ ಅವರು ಹಿಂದೂ ದೇವರ ಕುರಿತು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಹಿಂದೂಗಳಲ್ಲಿ ಮೂರು ಕೋಟಿ ದೇವತೆಗಳು ಏಕಿದ್ದಾರೆ ? ಅವಿವಾಹಿತರಿಗೆ ಹನುಮಂತ, ಎರಡು ಮದುವೆ ಮಾಡಿಕೊಳ್ಳುವವರಿಗೆ ಮತ್ತೊಬ್ಬ ದೇವರು. ಮದ್ಯಪಾನ ಮಾಡುವವರಿಗಾಗಿ ಒಬ್ಬ ದೇವರು, ಕೋಳಿ ಬಲಿಗೆ ಮತ್ತೊಬ್ಬರು ಎಂದು ಅವರು ಹೇಳಿದ್ದಾರೆ.
ಬಿಜೆಪಿ ನಾಯಕರು ಮತಯಾಚಿಸಲು ಬೀದಿಗಳಲ್ಲಿ ದೇವರ ಚಿತ್ರ ಹಾಕುತ್ತಾರೆ. ದೇವರು ದೇವಾಲಯದಲ್ಲಿ ಇರಬೇಕು, ನಂಬಿಕೆ ಹೃದಯದಲ್ಲಿ ಇರಬೇಕು ಎಂದು ಅವರು ಹೇಳಿದರು.





