ಬೆಂಗಳೂರು :–
ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ಬ್ಲ್ಯಾಕ್ ಮೇಲ್ ಆರೋಪ ಹೊರಿಸಿದ್ದ ಬೆಂಗಳೂರು ಮೂಲದ ಮಹಿಳೆ ನಾಪತ್ತೆಯಾಗಿದ್ದಾರೆ.
ಮಠದಲ್ಲಿ ನನ್ನ ಜತೆ ಅಸಭ್ಯವಾಗಿ ವರ್ತಿಸಿ, ಅದರ ವಿಡಿಯೋ ಮಾಡಿ ಪ್ರತಿನಿತ್ಯ ರಾತ್ರಿ ಬೆತ್ತಲೆ ವಿಡಿಯೋ ಕರೆ ಮಾಡಲು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು.
ಸಂತ್ರಸ್ತೆಯಿಂದ ಅಧಿಕೃತ ದೂರು ಪಡೆಯಲು ಪೊಲೀಸರು ಆಕೆಯನ್ನು ಹುಡುಕಾಡುತ್ತಿದ್ದರೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವರದಿ ಗಳಿಂದ ತಿಳಿದಿದೆ.





