“ಅನ್ನ ಭಾಗ್ಯ ಯೋಜನೆಯಡಿ ಮೇ ತಿಂಗಳಿಂದ ಅಕ್ಕಿ ಜತೆ ೨ ಕೆಜಿ ರಾಗಿ,ಜೋಳ ವಿತರಣೆ”

ಬೆಂಗಳೂರು :–

ರಾಜ್ಯ ಬಿಪಿಎಲ್‌ ಪಡಿತರ ಕಾರ್ಡ್‌ಾರರಿಗೆ ಅನ್ನ ಭಾಗ್ಯ ಯೋಜನೆಯಡಿ ಈ ತಿಂಗಳಿಂದ ಅಕ್ಕಿ ಜತೆಗೆ ೨ ಕೆಜಿ ರಾಗಿ, ಜೋಳ ನೀಡಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ನಿರ್ಧರಿಸಿದೆ. ಹಳೇ ಮೈಸೂರು ಭಾಗದವರಿಗೆ ೨ ಕೆಜಿ ರಾಗಿ ಹಾಗೂ ಹೈದರಾಬಾದ್ ಕರ್ನಾಟಕ ಹಾಗೂ ಮುಂಬಯಿ ಕರ್ನಾಟಕ ಭಾಗದ ಪಡಿತರದಾರರಿಗೆ ೨ ಕೆಜಿ ಜೋಳ ನೀಡಲು ನಿಗಮ ನಿರ್ಧರಿಸಿದೆ. ರಾಜ್ಯದಲ್ಲಿ ಈಗ ೧.೧೪ ಕೋಟಿಗೂ ಹೆಚ್ಚು ಬಿಪಿಎಲ್‌ ಕಾರ್ಡ್‌ಗಳಿದ್ದು, ೪.೦೧ ಕೋಟಿಗಿಂತ ಹೆಚ್ಚು ಸದಸ್ಯರಿದ್ದಾರೆ.

Share this post:

Leave a Reply

Your email address will not be published. Required fields are marked *

You cannot copy content of this page