ತಾಳಿ ಕಟ್ಟುವ ಸಮಯದಲ್ಲಿ ವರ ಕಾರು ಮತ್ತು ₹೨೦ ಲಕ್ಷಕ್ಕೆ ಬೇಡಿಕೆಯಿಟ್ಟ ಹಿನ್ನೆಲೆ ವಧು ಮದುವೆ ರದ್ದುಗೊಳಿಸಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಮೆರವಣಿಗೆಯಲ್ಲಿ ಬಂದ ವರ, ಮದುವೆಯ ಕೆಲ ಆಚರಣೆಗಳನ್ನು ಪೂರೈಸಿದ್ದನು. ಆದರೆ ತಾಳಿ ಕಟ್ಟುವ ಮುನ್ನ ವರದಕ್ಷಣೆಗೆ ವರ ಬೇಡಿಕೆಯಿಟ್ಟಿದ್ದು,
ಅದನ್ನು ಪೂರೈಸದೆ ತಾಳಿ ಕಟ್ಟುವುದಿಲ್ಲ ಎಂದಿದ್ದಾನೆ. ನನ್ನ ಕುಟುಂಬವನ್ನು ಎಲ್ಲರ ಮುಂದೆ ಅವಮಾನಿಸಿದ ದುರಾಸೆಯ ವ್ಯಕ್ತಿಯೊಂದಿಗೆ ವಿವಾಹವಾಗುವುದಿಲ್ಲ ಎಂದು ವಧು ಮದುವೆ ರದ್ದು ಮಾಡಿದ್ದಾಳೆ.





