“ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ನಡೆದ ಧರಣಿ ಸತ್ಯಾಗ್ರಹ 8ನೇ ದಿವಸವನ್ನು ಪೂರೈಸಿದೆ,ಕ ಮಾ ಶಾಲಾ ನೌಕರರ ಸಂಘ ಜಿಲ್ಲಾ ಘಟಕ ಬೆಂಬಲ”

ಚಿಕ್ಕೋಡಿ :–

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ನಡೆದ ಧರಣಿ ಸತ್ಯಾಗ್ರಹ 8 ನೇ ದಿವಸವನ್ನು ಪೂರೈಸಿದೆ, ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘ ಜಿಲ್ಲಾ ಘಟಕ ಚಿಕ್ಕೋಡಿ ಇವರ ಬೆಂಬಲ..

ಚಿಕ್ಕೋಡಿ ಭಾಗದ ವಿವಿಧ ಸಂಘ-ಸಂಸ್ಥೆಗಳು ಅಭೂತಪೂರ್ವ ಬೆಂಬಲ ಸೂಚಿಸುತ್ತಿವೆ, ಕರ್ನಾಟಕ ಮಾದ್ಯಮಿಕ ಶಾಲಾ ನೌಕರರ ಸಂಘದ ಚಿಕ್ಕೋಡಿ ಘಟಕದಿಂದ ಬೆಂಬಲ ನೀಡಿದರು, ಡಿ.ಎ.ಮಾನೆ ಅವರು ಮಾತನಾಡಿ, ಮೂರು ದಶಕಗಳ ಚಿಕ್ಕೋಡಿ ಜಿಲ್ಲೆಗಾಗಿ ನಡೆದ ಹೋರಾಟಕ್ಕೆ ಸರಕಾರ ಕೂಡಲೇ ಸ್ಪಂದಿಸಬೇಕಿತ್ತು,

ಈಗಾಗಲೇ ಚಿಕ್ಕೋಡಿಯು ಶೈಕ್ಷಣಿಕ ಜಿಲ್ಲೆಯಾಗಿ ಕಾರ್ಯ ಮಾಡುತ್ತಲಿದೆ, ಕೆಲವು ಕಛೇರಿಗಳನ್ನು ಹೊರತುಪಡಿಸಿ ಸಾಕಷ್ಟು ಕಚೇರಿಗಳು ಕಾರ್ಯ ನಿರ್ವಹಿಸುತ್ತಲಿವೆ, ಜನಪ್ರತಿನಿಧಿಗಳು ಜಿಲ್ಲೆಗಾಗಿ ಒತ್ತಡ ಮಾಡಬೇಕೆಂದು ಹೇಳಿದರು.

ಹಿರೆಕೋಡಿ ಗ್ರಾಮ ಪಂಚಾಯತಿಯ ಮಾಜಿ ಸದಸ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಆದ ಮಹಾವೀರ ಬಿಳ್ಳೂರೆ ಅವರು ಮಾತನಾಡಿ, ಬೆಳಗಾವಿ ರಾಜ್ಯದಲ್ಲಿಯೇ ಅತೀ ವಿಶಾಲವಾದ ಜಿಲ್ಲೆ ಆಗಿದೆ, ಬೆಳಗಾವಿ ಜಿಲ್ಲೆಯ ಅಭಿವೃದ್ಧಿ ಆಗದೇ ಇರುವುದು ದುರದೃಷ್ಟಕರ ಸಂಗತಿ, ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯಾಗಿ ಮಾಡಿದರೆ, ಕೈಗಾರಿಕೆ, ಉದ್ಯೋಗ, ರೈತರಿಗೆ ಮಾರುಕಟ್ಟೆ, ಶಿಕ್ಷಣ ಮುಂತಾದುಗಳ ಸೌಲಭ್ಯ ಸಿಗಲಿವೆ, ರಾಜ್ಯ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದು ಕೂಡಲೇ ಚಿಕ್ಕೋಡಿ ಜಿಲ್ಲೆಯಾಗಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

ಈ ಸಂಧರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಸಂಜು ಬಡಿಗೇರ, ಉಪಾಧ್ಯಕ್ಷ ಪ್ರತಾಪಗೌಡ ಪಾಟೀಲ, ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ, ಚಂದ್ರಶೇಖರ ಅರಭಾವಿ, ಮಹದೇವ್ ಬರಗಾಲೆ, ಬಿ. ಬಿ. ಬನ್ನಣ್ಣವರ್, ಮೋಹನ ಪಾಟೀಲ, ತಾನಾಜಿ ಸಾನೆ, ಚಿದಾನಂದ ಶಿರೋಳ, ಭೀಮರಾವ್ ಮಡ್ಡೆ, ಸುರೇಶ್ ಕದ್ದಿ, ರಮೇಶ ಡಂಗೇರ ಸೇರಿದಂತೆ ನೂರಾರು ಹೋರಾಟಗಾರರು ಉಪಸ್ಥಿತರಿದ್ದರು…

Share this post:

Leave a Reply

Your email address will not be published. Required fields are marked *

You cannot copy content of this page