ಮೈಸೂರು :–
ಪತ್ನಿ ಮರ್ಯಾದೆ ಕೊಡುತ್ತಿಲ್ಲವೆಂದು ಆಕೆಯ ಕೊಲೆಗೆ ಪತಿಯೇ ₹೫ ಲಕ್ಷಕ್ಕೆ ಸುಪಾರಿ ನೀಡಿದ ಘಟನೆ ಮೈಸೂರಿನ ಬಿಎಂಶ್ರೀ ನಗರದಲ್ಲಿ ನಡೆದಿದೆ.
ಪಾನಿಪುರಿ ವ್ಯಾಪಾರಿಯಾಗಿರುವ ಮಹೇಶ್ ತನ್ನ ಪತ್ನಿ ನಾಗರತ್ನ ಕೊಲೆಗೆ ಸುಪಾರಿ ನೀಡಿದ್ದು, ಮನೆಗೆ ನುಗ್ಗಿ ಪತ್ನಿಯನ್ನು ಹೊಡೆದು, ಗ್ಯಾಸ್ ಪೈಪ್ ಕತ್ತರಿಸಿ ಪೆಟ್ರೋಲ್ ಸುರಿದು ಕೊಲ್ಲುವಂತೆ ಹಂತಕರಿಗೆ ಹೇಳಿದ್ದಾನೆ ಎಂದು ವರದಿಯಾಗಿದೆ.
ಹಲ್ಲೆಯಿಂದಾಗಿ ತೀವ್ರವಾಗಿ ಗಾಯಗೊಂಡಿರುವ ನಾಗರತ್ನಮ್ಮಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.





