“ಬಡ ಕುಟುಂಬದ ಮಹಿಳೆಯರ ಸ್ವಾವಲಂಬಿ ಜೀವನ ನಡೆಸಲು ಉಚಿತ ಹೊಲಿಗೆ ಯಂತ್ರಗಳ ವಿತರಣೆ”

ನಿಪ್ಪಾಣಿ :–

ಜನಸೇವೆಯೇ ಜನಾರ್ಧನ ಸೇವೆ.!

ನಿಪ್ಪಾಣಿ ನಗರದಲ್ಲಿ ನಗರಸಭೆ ವತಿಯಿಂದ ಹೊಲಿಗೆ ಯಂತ್ರ, ತ್ರಿಚಕ್ರವಾಹನ ಹಾಗೂ ಲ್ಯಾಪ್ ಟಾಪ್‌ಗಳನ್ನು ಫಲಾನುಭವಿಗಳಿಗೆ ವಿತರಿಸುವ ಹಾಗೂ ನಗರಸಭೆ ಘನತ್ಯಾಜ್ಯ ನಿರ್ವಹಣೆಗೆ ಹೊಸ ವಾಹನಗಳಿಗೆ ಮಾಜಿ ಸಚಿವರು ಹಾಗೂ ನಿಪ್ಪಾಣಿ ಜನಪ್ರಿಯ ಶಾಸಕರಾದ ಸೌ.ಶಶಿಕಲಾ ಜೊಲ್ಲೆ ಯವರು ಪೂಜೆ ಸಲ್ಲಿಸಿ,ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಂಗವಿಕಲರಿಗೆ ಸಹಾನುಭೂತಿ ಬೇಡ,ಸ್ವಾವಲಂಬನೆ ಜೀವನ ನಡೆಸಲು ಸಾಮಾನ್ಯ ವ್ಯಕ್ತಿಗಳಿಂತ ವಿಶೇಷಚೇತನರು ಒಂದು ಹೆಜ್ಜೆ ಮುಂದು ಬರಬೇಕೆಂಬ ಉದ್ದೇಶದಿಂದ 16 ಫಲಾನುಭವಿಗಳಿಗೆ ಉಚಿತ ಯಂತ್ರಚಾಲಿತ ತ್ರಿಚಕ್ರ ವಾಹನ ವಿತರಣೆ ಮಾಡಲಾಯಿತು.
ಇದೇ ವೇಳೆ ಬಡ ಕುಟುಂಬದ ಮಹಿಳೆಯರ ಅನುಕೂಲಕ್ಕಾಗಿ ಸ್ವಾವಲಂಬಿ ಜೀವನ ನಡೆಸಲು ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಿದರು.

ಸ್ವಾಮಿ ವಿವೇಕಾನಂದರು ಹೇಳಿದ ಹಾಗೆ ನಮ್ಮ ದೇಶದ ಯುವ ಜನತೆ ಉತ್ತಮ ಶಿಕ್ಷಣದಿಂದ ವಂಚಿತರಾಗದೆ ಮುಂದುವರಿದಾಗ ದೇಶದ ಭವಿಷ್ಯ ಭದ್ರವಾಗುತ್ತದೆ.ಎಂಬ ಉದ್ದೇಶದಿಂದ ಎಂ.ಬಿ. ಬಿ.ಎಸ್ ಮತ್ತು ಬಿ.ಇ.ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಿ,ಅವರ ಮುಂದಿನ ಜೀವನ ಉಜ್ವಲವಾಗಿರಲಿ ಎಂದು ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು,ನಗರಸಭೆ ಸದಸ್ಯರು,ಅಧಿಕಾರಿಗಳು ಉಪಸ್ಥಿತರಿದ್ದರು.

Share this post:

Leave a Reply

Your email address will not be published. Required fields are marked *

You cannot copy content of this page