ಬೆಂಗಳೂರು :–
ಸಚಿವ ಜಮೀರ್ ಅಹ್ಮದ್ ಖಾನ್ ಅವರ ಜೀವನದ ಹಾಸ್ಯ ಪ್ರಸಂಗವನ್ನು ಅವರ ಪುತ್ರ, ನಟ ಝೈದ್ ಖಾನ್ ಹಂಚಿಕೊಂಡರು. ನಮ್ಮ ಟ್ರಾವೆಲ್ ಬಸ್ ಹೊರಡುವಾಗ ೩೦ ಜನ ಟಿಕೆಟ್ ಬುಕ್ ಮಾಡಿಕೊಂಡು ಹೋಗ್ತಾರೆ ಅಂದುಕೊಳ್ಳಿ.
ಅದರ ಚಾಲಕರು ರಸ್ತೆ ಮಧ್ಯೆ ಜನರನ್ನು ಹತ್ತಿಸಿ ದುಡ್ಡು ಮಾಡುತ್ತಿದ್ದಾರೆ ಎಂದು ಅಪ್ಪನಿಗೆ ಗೊತ್ತಾಯಿತು. ಆಗ ಸಿಸಿಟಿವಿ ಇರಲಿಲ್ಲ.
ಕಳ್ಳಾಟ ಪತ್ತೆಗೆ ಅಪ್ಪ ಬುರ್ಖಾ ಹಾಕಿ ಪ್ರಯಾಣಿಕರ ರೀತಿ ಬಸ್ ಹತ್ತಿದಾಗ ನಿಜಾಂಶ ತಿಳಿದು ಆ ಚಾಲಕನನ್ನು ಕೆಲಸದಿಂದ ತೆಗೆದರು ಎಂದು ಅವರು ತಿಳಿಸಿದರು.





