ಬೆಂಗಳೂರು :
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರ ಉಚ್ಚಾಟನೆ ಕುರಿತು ಮಾಜಿ ಸಿಎಂ ಸದಾನಂದ ಗೌಡ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.
ಆಡಿಯೋದಲ್ಲಿ, ”ಆಗಸ್ಟ್ ರಿಂದ ಅಕ್ಟೋಬರ್ ತಿಂಗಳವರೆಗೂ ವಿಜಯೇಂದ್ರ ಅವರನ್ನೇ ಮುಂದುವರೆಯಲು ಬಿಡಿ. ಅವರನ್ನು ಈಗಲೇ ತೆಗೆದುಹಾಕಿದರೆ ಬಿಜೆಪಿ ಪಕ್ಷ “ಲಿಂಗಾಯತ ವಿರೋಧಿ” ಎಂಬ ಹಣೆಪಟ್ಟಿ ಎನ್ನು ಹೊರಬೇಕಾಗುತ್ತದೆ. ಸೂಕ್ತ ಸಮಯದವರೆಗೂ ಕಾದು ಆ ಬಳಿಕ ವಿಜಯೇಂದ್ರ ಅವರನ್ನು ಒದ್ದು, ಹೊರಹಾಕಿ” ಎಂದು ಹೇಳಲಾಗಿದೆ ಎಂದು ವರದಿಯಾಗಿವೆ.





