ಚಿಕ್ಕೋಡಿ :–
ಚಿಕ್ಕೋಡಿ :
ತಾಲೂಕಿನ ಯಕ್ಸಂಬಾ ಪಟ್ಟಣದ
ಜೊಲ್ಲೆ ಶಿಕ್ಷಣ ಸಂಸ್ಥೆಯ, ಶಿವಶಂಕರ ಜೊಲ್ಲೆ ಇಂಗ್ಲೀಷ್ ಮಿಡಿಯಮ್ ಪಬ್ಲಿಕ್ ಸ್ಕೂಲ್ (ಸಿ.ಬಿ.ಎಸ್.ಇ), ನಣದಿಯಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳಿಗಾಗಿ ಅಕ್ಷರಾಭ್ಯಾಸ ಸಮಾರಂಭವನ್ನು ಆಯೋಜಿಸಲಾಗಿತ್ತು. ಆಶಾಜ್ಯೋತಿ ವಿಶೇಷ ಮಕ್ಕಳ ವಸತಿಯುತ ಶಾಲೆಯ ಅಧ್ಯಕ್ಷರಾದ ಶ್ರೀ ಜ್ಯೋತಿಪ್ರಸಾದ ಜೊಲ್ಲೆ ಹಾಗೂ ಅವರ ಧರ್ಮಪತ್ನಿ ಪ್ರಿಯಾ ಜೊಲ್ಲೆ ಅವರು ಸಸಿಗೆ ನೀರನ್ನು ಏರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶ್ರೀ ಪಂಚಾಕ್ಷರಿ ಮಠಪತಿ ಅವರು ಸಕಲ ವಿಧಿ ವಿಧಾನಗಳ ಮೂಲಕ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಭಾರತೀಯ ಸಂಸ್ಕೃತಿಯಲ್ಲಿ ಅಕ್ಷರಾಭ್ಯಾಸದ ಆರಂಭ ತಲೆಮಾರುಗಳನ್ನು ನಡೆದುಕೊಂಡು ಬಂದಿದೆ. ಮಕ್ಕಳಲ್ಲಿ ವಿದ್ಯೆಯ ಆಸಕ್ತಿ ಹುಟ್ಟುವಂತಹ ವಾತಾವರಣ ಮನೆಯಲ್ಲಿ ನಿರ್ಮಾಣವಾಗಬೇಕು. ಬಾಲ್ಯದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆ ಹಾಗೂ ವಿಕಾಸಕ್ಕೆ ಪೂರಕವಾದ ವ್ಯವಸ್ಥೆಯನ್ನು ಶಾಲೆ ಮತ್ತು ಮನೆಯಲ್ಲಿ ಒದಗಿಸಿಕೊಡಬೇಕು ಎಂದರು. ವಿದ್ಯಾದಾಯಿ ಸರಸ್ವತಿ, ಧನದಾಯಿ ಮಹಾಲಕ್ಷಿö್ಮ ಹಾಗೂ ವಿಘ್ನ ವಿನಾಶಕ ಗಣೇಶ ಈ ಮೂರು ದೈವ ಗಣಕ್ಕೆ ಸಕಲ ವಿಧಿಗಳ ಮೂಲಕ ಪೂಜೆಯನ್ನು ಸಲ್ಲಿಸಲಾಯಿತು. ಪಾಲಕರು ತಮ್ಮ ಮಕ್ಕಳೊಂದಿಗೆ ಸಮಾರಂಭದಲ್ಲಿ ಪಾಲ್ಗೊಂಡು ಅಕ್ಷರಾಭ್ಯಾಸ ಮಾಡಿಸಿದರು. ಪಾಲಕರು ಎಲ್ಲರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಶಿವರಾಜ ಜೊಲ್ಲೆ, ಸಂಯೋಜನಾಧಿಕಾರಗಳಾದ ಡಾ.ಎಮ್,ಎಮ್ ಪಾಟೀಲ, ಡಾ. ರವಿ ಕುರಬೆಟ್ಟ, ರಾಕೇಶ ಮಗದುಮ, ಪಾಲಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಚಾರ್ಯರಾದ ನಂದಾ ಚುನಮರಿ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಹಂಚಿಕೊಂಡರು. ಆಕಾಶ ಮಾಯನ್ನವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.





